ಫ್ಯಾನ್ಸ್‌ಗೆ ಆಫರ್ ನೀಡಿದ ಹಾಟ್ ನಟಿ ಸನ್ನಿ ಲಿಯೋನ್

ಶನಿವಾರ, 16 ಡಿಸೆಂಬರ್ 2023 (12:04 IST)
10 ವರ್ಷಗಳ ಹಿಂದೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಸನ್ನಿ ಲಿಯೋನ್, ಜಿಸ್ಮ್ 2, ಜಾಕ್‌ಪಾಟ್, ರಾಗಿಣಿ ಎಂಎಂಎಸ್ 2, ಏಕ್ ಪಹೇಲಿ ಲೀಲಾ, ಕುಚ್ ಕುಚ್ ಲೋಚಾ ಹೈ ಮತ್ತು ಒನ್ ನೈಟ್ ಸ್ಟ್ಯಾಂಡ್‌ ಚಿತ್ರದಲ್ಲಿ ನಟಿಸಿದ್ದಲ್ಲದೇ ಸ್ವೀಟ್ ಡ್ರೀಮ್ಸ್ ಎನ್ನುವ ಇ-ಬಕ್‌ನ ಲೇಖಕಿ ಕೂಡಾ ಆಗಿದ್ದಾಳೆ.
 
ಮಾಧ್ಯಮ ಮತ್ತು ಅಭಿಮಾನಿಗಳು ಗಾಸಿಪ್ ಹರಡಿಸುವುದನ್ನು ನಿಲ್ಲಿಸುವುದಿಲ್ಲ. ನನ್ನ ಹೊಸ ಮೊಬೈಲ್ ಆಪ್ ಅಧಿಕೃತ ಮಾಹಿತಿ ನೀಡುವುದಲ್ಲದೇ ಅಭಿಮಾನಿಗಳೊಂದಿಗೆ ನೇರ ಸಂವಾದ ನಡೆಸಲು ಸಾಧ್ಯವಾಗುತ್ತದೆ ಎಂದು ಬಾಲಿವುಡ್ ಹಾಟ್ ನಟಿ ಸನ್ನಿ ಲಿಯೋನ್ ಹೇಳಿದ್ದಾರೆ.
 
ಮಾಧ್ಯಮಗಳು ನನ್ನ ಬಗ್ಗೆ ಇಲ್ಲ ಸಲ್ಲದ ಸುದ್ದಿಗಳನ್ನು ವರದಿ ಮಾಡುವುದನ್ನು ನಿಲ್ಲಿಸುವುದಿಲ್ಲ. ಆದರೆ, ನನ್ನ ಮೊಬೈಲ್ ಆಪ್‌ನಲ್ಲಿ  ನನ್ನಲ್ಲಿರುವ ಮಾಹಿತಿಯನ್ನು ಶೇರ್ ಮಾಡುವುದರಿಂದ ಸುಳ್ಳು ವದಂತಿ ಹರಡುವುದು ತಪ್ಪುತ್ತದೆ ಎಂದು ತಿಳಿಸಿದ್ದಾರೆ.
 
ಮೊಬೈಲ್ ಆಪ್ ಹೊಂದಿರುವ ಬಾಲಿವುಡ್‌ನ ಏಕೈಕ ನಟಿಯಾದ ಸನ್ನಿ, ಇ-ಕಾಮರ್ಸ್ ಉದ್ಯಮವನ್ನು ಪ್ರವೇಶಿಸುತ್ತಿದ್ದಾರೆ. ಭವಿಷ್ಯದಲ್ಲಿ ತುಂಬಾ ಸಾಧಿಸುವುದಿದೆ ಎಂದು ನುಲಿದಿದ್ದಾರೆ.
 
ಪ್ರಸ್ತುತ ನಾನು ಅರ್ಬಾಜ್ ಖಾನ್ ನಟನೆಯ, ರಾಜೀವ್ ವಾಲಿಯಾ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದು ಬಿಜಿಯಾಗಿದ್ದೇನೆ ಎಂದು ಬಾಲಿವುಡ್ ಹಾಟ್ ಹಾಟ್ ನಟಿ ಸನ್ನಿ ಲಿಯೋನ್ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ