ಮದುವೆ ದಿನ ರಣವೀರ್ ಸಿಂಗ್ ತಮ್ಮ ಮುದ್ದಿನ ಮಡದಿ ದೀಪಿಕಾಗೆ ತೊಡಿಸಿದ ಉಂಗುರದ ಬೆಲೆ ಎಷ್ಟು ಗೊತ್ತಾ?

ಶನಿವಾರ, 17 ನವೆಂಬರ್ 2018 (14:24 IST)
ಮುಂಬೈ : ಈಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟ ರಣವೀರ್ ಸಿಂಗ್ ಮದುವೆ ಹಿಂದಿನ ದಿನ  ನಿಶ್ಚಿತಾರ್ಥ ಕಾರ್ಯಕ್ರಮದಂದು ತಮ್ಮ ಮುದ್ದಿನ ಮಡದಿ ದೀಪಿಕಾ ಪಡುಕೋಣೆ ಅವರಿಗೆ ತೊಡಿಸಿದ ಉಂಗುರದ ಬೆಲೆ ಕೇಳಿದ್ರೆ ದಂಗಾಗ್ತೀರಾ.

ಹೌದು. ಬಾಲಿವುಡ್ ನ ಕ್ಯೂಟ್ ಕಪಲ್ ದೀಪಿಕಾ- ರಣವೀರ್ ಗುರುವಾರ ಇಟಲಿಯ ಸುಂದರ ಪ್ರವಾಸಿ ತಾಣ ಲೇಕ್ ಕೊಮೊವಿನ ವಿಲ್ಲಾ ಡೆಲ್ ಬಲ್ಬಿಯಾನೆಲ್ಲೊದಲ್ಲಿ ಅದ್ದೂರಿಯಾಗಿ ಸಪ್ತಪದಿ ತುಳಿದಿದ್ದಾರೆ. ಹಾಗೇ ವಿವಾಹದ ಹಿಂದಿನ ದಿನವಷ್ಟೇ ಇಬ್ಬರೂ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು.

 

ಆ ವೇಳೆ ರಣವೀರ್‌ ಸಿಂಗ್‌, ತಮ್ಮ ಭಾವಿ ಪತ್ನಿಗೆ ಸುಂದರವಾದ ವಜ್ರದ ಉಂಗುರವೊಂದನ್ನು ತೊಡಿಸಿದ್ದರು. ಈ ಸುಂದರ ಉಂಗುರದ ಬೆಲೆ 1.3 ಕೋಟಿ ರು.ನಿಂದ 2.3 ಕೋಟಿ ರು.ವರೆಗೂ ಇರಬಹುದು ಎಂದು ಹೇಳಲಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ