ಮದ್ಯದಂಗಡಿಗೆ ತೆರಳಲು ಸಹಾಯ ಮಾಡಿ! ನಟ ಸೋನು ಸೋದ್ ಗೆ ಅಭಿಮಾನಿಯ ರಿಕ್ವೆಸ್ಟ್!

ಮಂಗಳವಾರ, 26 ಮೇ 2020 (09:12 IST)
ಮುಂಬೈ: ಬಾಲಿವುಡ್ ನಟ ಸೋನು ಸೂದ್ ಲಾಕ್ ಡೌನ್ ಸಮಯದಲ್ಲಿ ಕಾರ್ಮಿಕರನ್ನು ತವರಿಗೆ ಕಳುಹಿಸಲು ಬಸ್ ವ್ಯವಸ್ಥೆ ಮಾಡಿ ನೆರವಾದ ಘಟನೆ ಎಲ್ಲರೂ ಓದಿರುತ್ತೀರಿ. ಈಗ ಸೋನು ಸೂದ್ ಗೆ ಅಭಿಮಾನಿಯೊಬ್ಬರು ವಿಚಿತ್ರ ಮನವಿ ಮಾಡಿದ್ದಾರೆ.


ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೇ ಲಾಕ್ ಆಗಿದ್ದ ಪಾನ ಪ್ರಿಯ ನೆಟ್ಟಿಗರೊಬ್ಬರು ‘ಭಾಯಿ.. ನಾನು ಮನೆಯಲ್ಲೇ ಸಿಲುಕಿಕೊಂಡಿರುವೆ. ಮನೆಯಿಂದ ಲಿಕ್ಕರ್ ಶಾಪ್ ವರೆಗೆ ಹೋಗಲು ಸಹಾಯ ಮಾಡಿ’ ಎಂದು ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ.

ಇದಕ್ಕೆ ಸೋನು ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ. ‘ಸಹೋದರ ನಿನಗೆ ಮದ್ಯದಂಗಡಿಯಿಂದ ಮನೆಗೆ ತೆರಳಲು ನಾನು ಸಹಾಯ ಮಾಡಬಲ್ಲೆ. ಅಗತ್ಯ ಬಿದ್ದರೆ ಕರೆ ನೀಡು’ ಎಂದಿದ್ದಾರೆ. ಈ ಟ್ವೀಟ್ ಈಗ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ