ಮದ್ಯದಂಗಡಿ ಆಯ್ತು, ಈಗ ಗರ್ಲ್ ಫ್ರೆಂಡ್ ಜತೆ ಸೇರಿಸಲು ಸೋನು ಸೂದ್ ಗೆ ಬೇಡಿಕೆ!
ಅದಾಗಿ ದಿನ ಕಳೆಯುವಷ್ಟರಲ್ಲಿ ಮತ್ತೊಬ್ಬ ನೆಟ್ಟಿಗ ಸೋನು ಸೂದ್ ಗೆ ಗರ್ಲ್ ಫ್ರೆಂಡ್ ಜತೆ ಸೇರಲು ಸಹಾಯ ಕೋರಿದ್ದಾನೆ! ಗರ್ಲ್ ಫ್ರೆಂಡ್ ಬಿಹಾರದಲ್ಲಿದ್ದಾಳೆ. ಅವಳನ್ನು ಕರೆತರಲು ಸಹಾಯ ಮಾಡಿ ಎಂದು ಕೋರಿದ್ದಾನೆ. ಇದಕ್ಕೆ ತಮಾಷೆಯಾಗಿಯೇ ಪ್ರತಿಕ್ರಿಯಿಸಿರುವ ಸೋನು ಸೂದ್ ‘ಇಬ್ಬರೂ ಸದ್ಯಕ್ಕೆ ದೂರ ದೂರವೇ ಇರಿ. ಅದುವೇ ಒಳ್ಳೆಯದು. ನಿಮ್ಮಿಬ್ಬರ ಸಂಬಂಧಕ್ಕೆ ಈಗ ಆಸಿಡ್ ಟೆಸ್ಟ್ ಕಾಲ’ ಎಂದು ಟೀಸ್ ಮಾಡಿದ್ದಾರೆ.