ಲಾಕ್ ಡೌನ್ ಬಳಿಕ ಕಿರುತೆರೆಗೆ ಸೃಜನ್ ಲೋಕೇಶ್ ರಿ ಎಂಟ್ರಿ

ಬುಧವಾರ, 27 ಮೇ 2020 (08:56 IST)
ಬೆಂಗಳೂರು: ಲಾಕ್ ಡೌನ್ ಬಳಿಕ ಕಿರುತೆರೆ ಕಾರ್ಯಕ್ರಮದಲ್ಲಿ ಹೊಸ ಬದಲಾವಣೆಗಳನ್ನು ತರಲು ಯತ್ನಿಸುತ್ತಿರುವ ಕಲರ್ಸ್ ವಾಹಿನಿ ಮತ್ತೆ ತನ್ನ ಜನಪ್ರಿಯ ಶೋದೊಂದಿಗೆ ಮರಳಿ ಬರುತ್ತಿದೆ.


ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತೆ ‘ಮಜಾ ಟಾಕೀಸ್’ ಬರಲಿದೆ. ಮೊದಲೆರಡು ಸೀಸನ್ ಗಳಿಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿತ್ತು. ಬಳಿಕ ಸೃಜನ್ ಹಿರಿತೆರೆಯಲ್ಲಿ ಬ್ಯುಸಿಯಾದರು. ಈಗ ಮತ್ತೆ ತಮ್ಮ ಹಳೆಯ ಕಾರ್ಯಕ್ರಮದೊಂದಿಗೆ ಕಿರುತೆರೆಗೆ ಮರಳಲಿದ್ದಾರೆ.

ಈಗಾಗಲೇ ಪ್ರೋಮೋ ಹರಿಯಬಿಟ್ಟಿದ್ದರೂ ಯಾವಾಗಿನಿಂದ ಮಜಾ ಟಾಕೀಸ್ ಶುರುವಾಗಲಿದೆ ಎಂದು ಹೇಳಿಲ್ಲ. ಆದರೆ ಲಾಕ್ ಡೌನ್ ಬಳಿಕ ಸೃಜನ್ ಅಭಿಮಾನಿಗಳಿಗೆ ಮತ್ತೆ ಹಳೆಯ ಶೋ ಹೊಸ ರೂಪದಲ್ಲಿ ನೋಡುವ ಖುಷಿ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ