ನನ್ನ ಹತ್ತಿರ ಸ್ರ್ಕೀಪ್ಟ್ ಇಲ್ಲ ಸಲ್ಮಾನ್ ಎದುರು ಪ್ರಸ್ತುತಪಡಿಸಲು - ಫರ್ಹಾ ಖಾನ್

ಮಂಗಳವಾರ, 16 ಆಗಸ್ಟ್ 2016 (16:06 IST)
ನನ್ನ ಹತ್ತಿರ ಅಂಥ ಕಥೆಯಿಲ್ಲ, ಅದನ್ನು ಪ್ರಸ್ತುತಪಡಿಸಲು ಎಂದು ಬಾಲಿವುಡ್ ಕೋರಿಯೋಗ್ರಾಫರ್ ಫರ್ಹಾ ಖಾನ್ ತಿಳಿಸಿದ್ದಾರೆ. ಈಗಾಗ್ಲೇ ಸಲ್ಮಾನ್ ಖಾನ್ ಮುನ್ನಿ ಬದ್ನಾಮ್, ಫೇವಿಕಾಲ್ ಸೇ ಹಾಜುಗಳನ್ನು ಕೋರಿಯೋಗ್ರಾಫ್ ಮಾಡಿರುವ ಫರ್ಹಾ ಖಾನ್ ಈ ಮಾತನ್ನು ಹೇಳಿದ್ದಾರೆ. 
ಇದಕ್ಕೂ ಮೊದಲು ಶಾರೂಖ್ ಖಾನ್ ಹಾಗೂ ಅಕ್ಷಯ್ ಕುಮಾರ್ ಚಿತ್ರದಲ್ಲಿ ಫರ್ಹಾ ಖಾನ್ ನಿರ್ದೇಶನ ಮಾಡಿದ್ದರು. 
 
ಸಲ್ಮಾನ್ ಮುಂದಿನ ಚಿತ್ರದಲ್ಲಿ ನಿರ್ದೇಶನ ಮಾಡುವ ಕುರಿತು ಏನಾದ್ರು ಪ್ಲ್ಯಾನ್ ಇದೆಯಾ? ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಸಲ್ಮಾನ್, ನನಗೆ ಗೊತ್ತಿಲ್ಲ, ನನ್ನ ಹತ್ತಿರ ಅಂಥ ಸ್ಕ್ರೀಪ್ಟ್ ಯಾವುದು ಇಲ್ಲ, ಅಲ್ಲದೇ ಅವರಿಗಾಗಿ ನಾನು ಯಾವುದೇ ಸ್ಕ್ರೀಪ್ಟ್ ಬರೆಯುತ್ತಿಲ್ಲ ಎಂದು ತಿಳಿಸಿದರು. 
 
ಹಲವು ವರ್ಷಗಳಿಂದ ಸಲ್ಮಾನ್ ಹಾಗೂ ನಾನು ಪರಿಚಿತರು. ನಾವಿಬ್ಬರು ಅತ್ಯುತ್ತಮ ಸ್ನೇಹಿತರಾಗಿದ್ದೇವೆ. ನಾವಿಬ್ಬರ ಜತೆಗೂಡಿ ಕೆಲಸ ಮಾಡಿದ್ದ ಎಲ್ಲವು ಹಿಟ್ ಆಗಿವೆ ಎಂದು ತಿಳಿಸಿದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 

ವೆಬ್ದುನಿಯಾವನ್ನು ಓದಿ