ಇದುವಗೂ ಒಂಟಿಯಾಗಿ ಜೀವಿಸಿದ್ದು ಆನಂದದಾಯಕವಾಗಿದೆ ಎಂದು ಬಾಲಿವುಡ್ ನಟಿ ರಾಖಿ ಸಾವಂತ್ ಹೇಳಿದ್ದಾರೆ. ಬಾಬಾ ರಾಮ್ ದೇವ್, ಪ್ರಧಾನಿ ಮೋದಿ, ಸಲ್ಮಾನ್ ಖಾನ್...ಇವರೆಲ್ಲಾ ಬ್ರಹ್ಮಚಾರಿಗಳು. ಅವರನ್ನು ನೋಡಿ ನಾನು ಸಹ ಹಾಗೆಯೇ ಇರಬೇಕೆಂದಿದ್ದೇನೆ.
ಧನವಂತ, ಕಷ್ಟಪಡುವವ, ನಾಲ್ಕು ಮಂದಿಯ ಜತೆ ಓಡಾಡುವವ, ಶಕ್ತಿವಂತ ವ್ಯಕ್ತಿ ಸಿಗುವವರೆಗೂ ತಾನು ಮದುವೆಯಾಗಲ್ಲ ಎಂದು ಇತ್ತೀಚೆಗೆ ರಾಖಿ ಹೇಳಿದ್ದಾರೆ. ಆ ರೀತಿಯ ಯುವಕನನ್ನು ಹುಡುಕರು ಈಗ ಮತ್ತೊಮ್ಮೆ ರಾಖಿ ಕಾ ಸ್ವಯಂವರ ಆಯೋಜಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.