ಫಾರಿನ್ ಬೆಡಗಿಯರೊಂದಿಗೆ ಚಿಕ್ಕಣ್ಣ ಡ್ಯಾನ್ಸ್

ಗುರುವಾರ, 5 ಮೇ 2016 (15:57 IST)
ಚಿಕ್ಕಣ್ಣ ಅಂದಾಕ್ಷಣ ನೆನಪಾಗೋದು ಅವರ ಡೈಲಾಗ್ ಗಳು ಹಾಗೇ ಹಾಸ್ಯ ಪಾತ್ರಗಳು. ಈಗಾಗಲೇ ತಾವು ಅಭಿನಯಿಸಿರುವಂತಹ ಎಲ್ಲಾ ಸಿನಿಮಾಗಳಲ್ಲೂ ಚಿಕ್ಕಣ್ಣ ನೆನಪಿನಲ್ಲಿ ಉಳಿಯುತ್ತಾರೆ. ಇಷ್ಟು ದಿನ ಕೇವಲ ಹಾಸ್ಯ ಪಾತ್ರಗಳನ್ನು ಮಾಡುತ್ತಿದ್ದ ಚಿಕ್ಕಣ್ಣ ಈಗ ವಿಭಿನ್ನವಾದ ಪಾತ್ರದಳನ್ನು ಮಾಡುತ್ತಿದ್ದಾರೆ.
ಅದರಂತೆ ತಲೆ ಬಾಚ್ಕೊಳ್ಳಿ ಪೌಡರ್ ಹಾಕ್ಕೊಳ್ಳಿ ಸಿನಿಮಾದಲ್ಲೂ ಚಿಕ್ಕಣ್ಣ ಡಿಫರೆಂಟ್ ಪಾತ್ರವನ್ನು ಮಾಡಿದ್ದಾರೆ. ಅಂದ್ಹಾಗೆ ಈ ಸಿನಿಮಾದಲ್ಲಿ ಚಿಕ್ಕಣ್ಣ ಅವರದ್ದು ಪ್ರಮುಖವಾದ ಪಾತ್ರವಂತೆ. ಸಿನಿಮಾದ ಕಥೆಯಲ್ಲಿ ಚಿಕ್ಕಣ್ಣ ಅವರ ಪಾತ್ರಕ್ಕೆ ಮಹತ್ವವಿದೆಯಂತೆ. 
 
ಸಿನಿಮಾದಲ್ಲಿ ಅಭಿನಯಿಸಲು ನನಗೆ ಅವಕಾಶ ಬಂದಾಗ ನಾನು ಅಭಿನಯಿಸುವ ಬಗ್ಗೆ ಹಲವು ಬಾರಿ ಯೋಚಿಸಿದೆ.ಆದ್ರೆ ಸಿನಿಮಾದಲ್ಲಿ ಕೇವಲ ಹೀರೋನ ಗೆಳೆಯನ ಪಾತ್ರವಲ್ಲ.ಆ ಪಾತ್ರಕ್ಕೂ ತುಂಬಾನೇ ಮಹತ್ವವಿದೆ ಅಂತಾ ಗೊತ್ತಾದ ಬಳಿಕ ನಾನು ಈ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡೆ ಅಂತಾ ಅವರು ಹೇಳಿದ್ದಾರೆ.
 
ಅಲ್ಲದೇ ಇದುವೆರೆಗೂ ನೀವು ನೋಡಿರುವಂತಹ ಚಿಕ್ಕಣ್ಣನಿಗಿಂತ ವಿಭಿನ್ನವಾದ ಚಿಕ್ಕಣ್ಣನನ್ನು ಈ ಸಿನಿಮಾದಲ್ಲಿ ನೋಡಬಹುದು ಅಂತಾ ಅವರು ಹೇಳಿದ್ದಾರೆ.
 
ಇನ್ನು ಇಂಟರೆಸ್ಟಿಂಗ್ ವಿಚಾರ ಅಂದ್ರೆ ಈ ಸಿನಿಮಾದಲ್ಲಿ ಚಿಕ್ಕಣ್ಣ ಅವರಿಗಾಗಿ ಸ್ಪೆಷಲ್ ಹಾಡೊಂದನ್ನು ಮಾಡಲಾಗಿದೆ. ಚಿಕ್ಕಣ್ಣ ಚಿಕ್ಕಣ್ಣ ಅನ್ನೋ ಈ ಹಾಡಿನಲ್ಲಿ ಚಿಕ್ಕಣ್ಣ ಅವರು ಫಾರಿನ್ ಬೆಡಗಿಯರೊಂದಿಗೆ ಹೆಜ್ಜೆ ಹಾಕಿದ್ದಾರೆ.ಅಲ್ಲದೇ ಇದೊಂದು ಐಟಮ್ ನಂಬರ್ ಸಾಂಗ್ ಅಂತೆ. ಹಾಗಾಗಿ ಚಿಕ್ಕಣ್ಣ ಕೂಡ ಈ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲಗಳನ್ನು ಇಟ್ಟುಕೊಂಡಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ