ಗಳಿಕೆಯಲ್ಲೂ ದಾಖಲೆ ನಿರ್ಮಿಸಿದ ಗೋಧಿ ಬಣ್ಣ ಸಾಧಾರಣ ಮೈಕಟ್ಟು
ಮಂಗಳವಾರ, 9 ಆಗಸ್ಟ್ 2016 (08:51 IST)
ಅನಂತ್ ನಾಗ್ ಹಾಗೂ ರಕ್ಷಿತ್ ಶೆಟ್ಟಿ ಕಾಂಬಿನೇಷನ್ ನಲ್ಲಿ ಬಂದ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ವಿಶ್ವದಾದ್ಯಂತ ಸದ್ದು ಮಾಡಿರೋದು ಹಳೇ ವಿಚಾರ . ಸಿನಿಮಾ ಬಾಲಿವುಡ್ ಗೂ ರಿಮೇಕ್ ಆಗುತ್ತಿದೆ. ಹೀಗಿರುವಾಗಲೇ ಸಿನಿಮಾತಂಡ ಮೂಗಲಗಳಿಂದ ಇನ್ನೊಂದು ಇಂಟರೆಸ್ಟಿಂಗ್ ವಿಚಾರವೊಂದು ಹೊರ ಬಿದ್ದಿದೆ.
ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ಅಮೆರಿಕಾ, ಸಿಂಗಾಪೂರ್, ಇಟಲಿ, ಜಪಾನ್, ಸ್ವಿಟ್ಜರ್‌ಲ್ಯಾಂಡ್ ಮುಂತಾದ ಕಡೆ ಚಿತ್ರ ಬಿಡುಗಡೆಯಾಗಿದೆ. ಅಷ್ಟೇ ಅಲ್ಲ ಹಿಂದಿ, ತೆಲುಗು ಮತ್ತು ತಮಿಳಿಗೆ ಈಗಾಗಲೇ ಸಿನಿಮಾ ರೀಮೇಕ್ ರೈಟ್ಸ್ ಮಾರಾಟವಾಗಿದೆ. ಹೀಗಿರುವಾಗಲೇ ಸಿನಿಮಾ ತಂಡ ಮತ್ತೊಂದು ದಾಖಲೆ ಮಾಡಿದೆ.
ಚಿತ್ರದ ಸ್ಯಾಟ್‍ಲೈಟ್ ಹಾಗೂ ಡಿಜಿಟಲ್ ಹಕ್ಕು ಬರೋಬ್ಬರಿ 1 ಕೋಟಿ 40 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಜೀ ವಾಹಿನಿ ಚಿತ್ರದ ಸ್ಯಾಟ್‍ಲೈಟ್ ಹಕ್ಕನ್ನು ಪಡೆದುಕೊಂಡಿದೆ. ಇತ್ತೀಚೆಗೆ ಕೆಲವು ಚಿತ್ರಗಳ ಸ್ಯಾಟಲೈಟ್ ಹಕ್ಕುಗಳು ಮಾರಾಟವಾಗಿವೆ.
ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದಲ್ಲಿ ಅನಂತ್‍ನಾಗ್, ರಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಳೆದು ಹೋಗುವ ತಂದೆಯನ್ನು ಮಗ ಹುಡುಕುದೇ ಸಿನಿಮಾದ ಕಥಾ ಹಂದರ. ಶ್ರುತಿ ಹರಿಹರನ್ ಸಿನಿಮಾದ ನಾಯಕಿ. ಚಿತ್ರವನ್ನು ಹೇಮಂತ್ ರಾವ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಚಿತ್ರವನ್ನು ನಿರ್ಮಿಸಿದ್ದಾರೆ.