ಬಿಕಿನಿ ಫೋಟೋ ಹಾಕಿ ಜನರ ಕೆಂಗಣ್ಣಿಗೆ ಗುರಿಯಾದ ನಟಿ ಸಾರಾ ಅಲಿಖಾನ್

ಭಾನುವಾರ, 12 ಆಗಸ್ಟ್ 2018 (07:07 IST)
ಮುಂಬೈ : ಸದಾ ಒಂದಲ್ಲ ಒಂದು ವಿವಾದದ ಸುಳಿಯಲ್ಲಿ ಸಿಲುಕಿಕೊಳ್ಳುವ ಬಾಲಿವುಡ್ ನಟಿ ಸಾರಾ ಅಲಿಖಾನ್ ಇದೀಗ ತನ್ನ ಬಿಕಿನಿ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದರ ಮೂಲಕ ಮತ್ತೆ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


ಕೆಲ ದಿನಗಳ ಹಿಂದೆ ಇದೇ ಸಾರಾ ಖಾನ್​ ಸ್ನಾನದ ಕೋಣೆಯಲ್ಲಿ ಬೆತ್ತಲೆಯಾಗಿರುವ ವೀಡಿಯೋ ತುಣುಕೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರ ಮೂಲಕ ಭಾರೀ ಸುದ್ದಿಗೆ ಕಾರಣವಾಗಿದ್ದರು. ನಂತರ ವೀಡಿಯೋ ಕುರಿತಾಗಿ ಬಾರೀ ವಿರೋಧ ಕೇಳಿ ಬಂದ ಹಿನ್ನೆಲೆಯಲ್ಲಿ ಕ್ಷಣಮಾತ್ರದಲ್ಲಿ ಡಿಲೀಟ್ ಮಾಡಿದ್ದರು.


ಆದರೆ ಇದೀಗ ಗೋವಾ ಬೀಚ್ ನಲ್ಲಿ ತೆಗೆದ ತಮ್ಮ ಬಿಕಿನಿ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವುದರ ಮೂಲಕ ಮತ್ತೆ ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಸದ್ಯ, ಈ ಪೋಟೋಗಳು ಪಡ್ಡೆ ಹುಡುಗರ ನಿದ್ದೆ ಕೆಡಿಸಿದರೆ, ಇನ್ನೊಂದು ಕಡೆ ನಮ್ಮ ದೇಶದ ಸಂಸ್ಕೃತಿಗೆ ದಕ್ಕೆ ತರುವ ರೀತಿಯಲ್ಲಿ ಸಾರಾ ನಡೆದುಕೊಂಡಿದ್ದಾಳೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ