ಲಂಡನ್ ನಲ್ಲಿ ಚಿನ್ನದ ಟಾಯ್ಲೆಟ್ ಬಳಸುತ್ತಾರಂತೆ ವಿಜಯ್ ಮಲ್ಯ

ಭಾನುವಾರ, 12 ಆಗಸ್ಟ್ 2018 (15:29 IST)
ಮುಂಬೈ : ಭಾರತೀಯ ಬ್ಯಾಂಕ್ ಗಳಿಗೆ ಸುಮಾರು 9 ಸಾವಿರ ಕೋಟಿ ರೂ. ವಂಚಿಸಿ ದೇಶ ಬಿಟ್ಟಿರುವ ವಿಜಯ್ ಮಲ್ಯ ಅವರು ಲಂಡನ್ ನಲ್ಲಿರುವ ತಮ್ಮ ಮನೆಯಲ್ಲಿ ಚಿನ್ನದ ಟಾಯ್ಲೆಟ್ ಅನ್ನು ಬಳಸುತ್ತಿದ್ದಾರೆ ಎಂದು ಆಂಗ್ಲ ಲೇಖಕ ಮತ್ತು ಪ್ರೋಫೆಸರ್ ಜೇಮ್ಸ್ ಕ್ರ್ಯಾಬ್ ಟ್ರೀ ತಿಳಿಸಿದ್ದಾರೆ.


ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ  ಆಂಗ್ಲ ಲೇಖಕ ಮತ್ತು ಪ್ರೋಫೆಸರ್ ಜೇಮ್ಸ್ ಕ್ರ್ಯಾಬ್ ಟ್ರೀ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಲಂಡನ್ ರಿಜೆಂಟ್ ಪಾರ್ಕ್ ನಲ್ಲಿರುವ ಮಹಲೋಂದರಲ್ಲಿ ಮಲ್ಯ ವಾಸವಿದ್ದು, ಅವರ ಮನೆಗೆ ಒಂದು ಸಲ ಪ್ರೋಫೆಸರ್ ಜೇಮ್ಸ್ ಹೋಗಿದ್ದರಂತೆ, ಆ ಸಂದರ್ಭದಲ್ಲಿ ಚಿನ್ನದ ಟಾಯ್ಲೇಟ್ ನೋಡಿದ್ದರಂತೆ. ತಾವು ಭೇಟಿ ನೀಡಿದ ಸಂದರ್ಭದಲ್ಲಿ ಮಲ್ಯ ಬೇಸರದಲ್ಲಿದ್ದರು ಎಂದು ಜೇಮ್ಸ್ ಹೇಳಿದ್ದಾರೆ.


ಟಾಯ್ಲೆಟ್ ಕಮೋಡ್ ಅನ್ನು ಪೂರ್ಣ ಪ್ರಮಾಣದಲ್ಲಿ ಚಿನ್ನದಲ್ಲಿಯೇ ಮಾಡಲಾಗಿದೆ. ಅದರ ರಿಮ್, ಕೊಳಾಯಿ, ಎಲ್ಲವೂ ಚಿನ್ನದ್ದೇ ಆಗಿದೆ ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ