'ನಾನು ಸೆಕ್ಸ್‌ನ್ನು ಗಂಭೀರವಾಗಿ ಪರಿಗಣಿಸುತ್ತೇನೆ': ರಾಮಗೋಪಾಲ್ ವರ್ಮಾ

ಮಂಗಳವಾರ, 26 ಏಪ್ರಿಲ್ 2016 (15:00 IST)
'ಸೆಕ್ಸ್‌ ವಿಷಯವನ್ನು ನಾನು ಗಂಭೀರವಾಗಿ ಪರಿಗಣಿಸುತ್ತೇನೆ. ಸೆಕ್ಸ್‌ನ್ನು ಕಾಮಿಡಿ ವಿಷಯವನ್ನಾಗಿ ನಾನು ತಿಳಿದುಕೊಂಡಿಲ್ಲ. ನಾನು ಎಂದಿಗೂ ಕಾಮಿಡಿ ಎನ್ನುವುದಿಲ್ಲ. ಯಾಕಂದ್ರೆ ಅದನ್ನು ನಾನು ಗಂಭೀರವಾಗಿ ಪರಿಗಣಿಸುತ್ತೇನೆ ಎಂದು ಹೇಳಿದ್ದಾರೆ  ಖ್ಯಾತ ನಿರ್ಮಾಪಕ ರಾಮಗೋಪಾಲ ವರ್ಮಾ.

ಖ್ಯಾತ ಚಿತ್ರ ನಿರ್ಮಾಪಕ ರಾಮಗೋಪಾಲ್ ಬೋಲ್ಡ್ ಸ್ಟೇಟ್‌ಮೆಂಟ್‌ಗಳನ್ನು ನೀಡುವುದರಲ್ಲಿ ಸದಾ ಎತ್ತಿದ ಕೈ. ಇಂದಿನ ದಿನಗಳಲ್ಲಿ ಸೆಕ್ಸ್ ಕುರಿತು ಮೊದಲು ಚರ್ಚೆಗಳಾಗುತ್ತವೆ. ಇದಕ್ಕೆ ಸಂಬಂಧಪಟ್ಟಂತೆ ಖಾಸಗಿ ಚಾನೆಲ್ ನೀಡಿರುವ ಸಂದರ್ಶನದಲ್ಲಿ ಆರ್‌ಜಿವಿ ಸೆಕ್ಸ್ ಹಾಗೂ ಕಾಮಿಡಿ ಕುರಿತು ಮಾತುಗಳನ್ನಾಡಿದ್ದಾರೆ. 
 
'ನನ್ನ ಲೈಫ್‌ನಲ್ಲಿ ಸೋಲಿಗೆ ಕಾರಣ ಏನೆಂಬುದು ತಿಳಿದುಕೊಂಡಿದ್ದೇನೆ. 'ಕೀ ಆಗ್ ಹಾಗೂ ಡಿರ್ಪಾಟ್‌ಮೆಂಟ್' ಚಿತ್ರಗಳನ್ನು ಮಾಡಿದ್ದೇನೆ. ಆದರೆ ಈ ಚಿತ್ರಗಳು ಯಶಸ್ವಿಯಾಗಲಿಲ್ಲ. ಅದು ನನ್ನ ಕೆರಿಯರ್‌ನಲ್ಲೇ ಅತಿ ದೊಡ್ಡ ಫ್ಲಾಪ್ ಚಿತ್ರಗಳು. ಅದಕ್ಕಾಗಿ ಸೋಲು ಯಾವಾಗ ಬರುತ್ತದೆ ಎಂದರೆ ನಾವು ತಪ್ಪು ವಸ್ತು ಆಯ್ಕೆ ಮಾಡಿದಾಗ ' ಎಂದು ತಿಳಿಸಿದ್ದಾರೆ. 
 
ಆದರೆ ನಾನು ವಿಫಲವಾಗಲು ನನ್ನ ಅಹಂಕಾರವು ಕಾರಣವಾಗಿದೆ ಎಂದು ಒಪ್ಪಿಕೊಳ್ಳುತ್ತೇನೆ.ನನಗೆ ಫ್ಯಾಮಿಲಿ -ಡ್ರಾಮಾ ಇಷ್ಟವಾಗುವುದಿಲ್ಲ. ನಾನು ರಂಗೀಲಾ ಚಿತ್ರವನ್ನು ಅದೇ ರೀತಿ ನೋಡಿಲ್ಲ, ಅದೊಂದು ಲವ್, ಉತ್ತಮ ಮ್ಯೂಸಿಕ್, ಎಮೋಷನ್ಸ್ ಇರುವ ಚಿತ್ರ. ಆದ್ದರಿಂದ ನಾನು ಸೆಕ್ಸ್ ಹಾಸ್ಯ ಎಂದು ಪರಿಗಣಿಸುವುದಿಲ್ಲ. ಅದನ್ನು ಗಂಭೀರವಾಗಿ ಪರಿಗಣಿಸಿದ್ದೇನೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ