ಪತ್ನಿಗೆ ವಿಚ್ಛೇದನ ಕೊಡ್ತೀರಾ ಎಂದು ಪತ್ರಕರ್ತರು ಕೇಳಿದ್ದಕ್ಕೆ ನಟ ಇಮ್ರಾನ್ ಖಾನ್ ಉತ್ತರವೇನು ಗೊತ್ತಾ?

ಭಾನುವಾರ, 9 ಜೂನ್ 2019 (08:56 IST)
ಮುಂಬೈ: ಬಾಲಿವುಡ್ ನಟ ಇಮ್ರಾನ್ ಖಾನ್ ಮತ್ತು ಪತ್ನಿ ಆವಂತಿಕಾ ನಡುವಿನ ಸಂಬಂಧ ಸರಿಯಿಲ್ಲ. ಇಬ್ಬರೂ ವಿಚ್ಛೇದನಕ್ಕೊಳಗಾಗುತ್ತಿದ್ದಾರೆ ಎಂದೆಲ್ಲಾ ಕೆಲವು ದಿನಗಳ ಹಿಂದೆ ಸುದ್ದಿ ಹಬ್ಬಿತ್ತು.


ಈಗ ಆ ಎಲ್ಲಾ ವದಂತಿಗಳಿಗೆ ಸ್ವತಃ ಇಮ್ರಾನ್ ಮತ್ತು ಅವರ ಅತ್ತೆ ವಂದನಾ ಸ್ಪಷ್ಟನೆ ನೀಡಿದ್ದಾರೆ. ಇಮ್ರಾನ್ ಕಾರ್ಯಕ್ರಮವೊಂದಕ್ಕೆ ಬಂದಿದ್ದಾಗ ಪತ್ರಕರ್ತರು ನಿಜವಾಗಿಯೂ ನಿಮ್ಮ ಪತ್ನಿಗೆ ನೀವು ವಿಚ್ಛೇದನ ನೀಡುತ್ತಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ಪತ್ರಕರ್ತರ ಪ್ರಶ್ನೆಯಿಂದ ಇರಿಸುಮುರಿಸಿಗೊಳಗಾದ ಇಮ್ರಾನ್ ‘ಇಂತಹಾ ಕಾರ್ಯಕ್ರಮದಲ್ಲಿ ಈ ಪ್ರಶ್ನೆ ಕೇಳುತ್ತಿದ್ದೀರಲ್ಲಾ ಸರಿಯಾ?’ ಎಂದು ಮರುಪ್ರಶ್ನೆ ಹಾಕಿದ್ದಾರೆ. ಅಷ್ಟೇ ಅಲ್ಲ ಈ ಬಗ್ಗೆ ಇಮ್ರಾನ್ ಅತ್ತೆ ವಂದನಾ ಕೂಡಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ‘ಹೌದು ದಂಪತಿ ನಡುವೆ ವೈಮನಸ್ಯ ಬಂದಿದ್ದು  ನಿಜ. ಆದರೆ ಅವರು ಬೇರೆಯಾಗುತ್ತಿಲ್ಲ. ಅದನ್ನು ಅವರು ಬಗೆಹರಿಸಿಕೊಳ್ಳುತ್ತಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ