ಪಾಕಿಸ್ತಾನದೊಂದಿಗಿನ ಎಲ್ಲ ಸಭೆಯನ್ನು ರದ್ದು ಮಾಡಿದ ಸೌದಿ ರಾಜ!

ಶುಕ್ರವಾರ, 7 ಜೂನ್ 2019 (08:05 IST)
ಮೆಕ್ಕಾ: ಪಾಕ್ ಪ್ರಧಾನಿ ಇಮ್ರಾನ್ ಖಾನ್  ಸೌದಿ ರಾಜ ಸಲ್ಮಾನ್ ಬಿನ್ ಅಬ್ದುಲಜೀಜ್ ಅವರಿಗೆ ಅವಮಾನ ಮಾಡಿದ ಆರೋಪ ಕೇಳಿಬಂದಿದೆ.




ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮೆಕ್ಕಾದಲ್ಲಿ ಆಯೋಜಿಸಲಾಗಿದ್ದ ಇಸ್ಲಾಮಿಕ್ ಸಹಕಾರ ಸಂಘಟನೆ(ಒಐಸಿ) ಕಾರ್ಯಕ್ರಮಕ್ಕೆ ಆಗಮಿಸಿದಾಗ ಸೌದಿ ರಾಜ ಸಲ್ಮಾನ್ ಬಿನ್ ಅಬ್ದುಲಜೀಜ್ ಅವರು ಪ್ರಧಾನಿಯನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.


ಆದರೆ ರಾಜನ ಎದುರು ಆಗಮಿಸಿದ ಇಮ್ರಾನ್ ಖಾನ್ ಕೆಲವು ಸನ್ನೆಗಳನ್ನು ಭಾಷಾಂತರಕಾರನತ್ತ ಮಾಡಿದ್ದು, ಭಾಷಾಂತರಕಾರ ಅದನ್ನು ರಾಜನಿಗೆ ತಿಳಿಸಿ ರಾಜನಿಂದ ಪ್ರತಿಕ್ರಿಯೆ ಬರುವ ಮೊದಲೆ ಅಲ್ಲಿಂದ ಹೊರಟು ಬಿಟ್ಟರು. ಇದರಿಂದ ಸಿಟ್ಟಾದ ಸೌದಿ ರಾಜ ನಂತರ ಪಾಕಿಸ್ತಾನದೊಂದಿಗಿನ ಎಲ್ಲ ಸಭೆಯನ್ನು ರದ್ದು ಮಾಡಿದ್ದಾರೆ.   ಹಾಗೇ ಆತ್ಮೀಯತೆ ತೋರಿದ ರಾಜನ ಜೊತೆ ಇಮ್ರಾನ್ ಖಾನ್ ಈ ರೀತಿಯಾಗಿ ನಡೆದುಕೊಂಡು, ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ