ಇಹಲೋಕ ತ್ಯಜಿಸಿದ ಇನ್ ಸಾನ್ ಚಿತ್ರದ ನಿರ್ದೇಶಕ ಕೆ. ಸುಭಾಷ್
ಚೆನ್ನೈ: ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಅಭಿನಯದ ಇನ್ ಸಾನ್ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ ಖ್ಯಾತ ತಮಿಳು ನಿರ್ದೇಶಕ ಕೆ. ಸುಭಾಷ್ ಇನ್ನಿಲ್ಲ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಚೆನ್ನೈಯಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅವರಿಗೆ 57 ವರ್ಷ ವಯಸ್ಸಾಗಿತ್ತು. ವಿಜಯ್ ಕಾಂತ್ ಅಭಿನಯದ ಛತ್ರಿಯನ್ ಎಂಬ ತಮಿಳು ಸಿನಿಮಾ ನಿರ್ದೇಶಕರಾಗಿ ಅವರು ಮನೆ ಮಾತಾಗಿದ್ದರು. ಈ ಸಿನಿಮಾ ಅವರಿಗೆ ಸಾಕಷ್ಟು ಖ್ಯಾತಿ ತಂದು ಕೊಟ್ಟಿತು. ಇದಲ್ಲದೆ ಶಾರುಖ್ ಖಾನ್ ಅಭಿನಯದ “ಚೆನ್ನೈ ಎಕ್ಸ್ ಪ್ರೆಸ್” ಹಾಗೂ “ಹೌಸ್ ಪುಲ್ 3” ಸಿನಿಮಾಗಳಿಗೂ ಕತೆ ಬರೆದ ಹೆಗ್ಗಳಿಕೆ ಅವರದ್ದಾಗಿತ್ತು.
ಇದಲ್ಲದೆ ಹಲವು ಹಿಂದಿ ಚಿತ್ರಗಳಿಗೆ ಸುಭಾಷ್ ಕೆಲಸ ಮಾಡಿದ್ದಾರೆ. ಇಂದು ಅವರ ಅಂತ್ಯಕ್ರಿಕಯೆ ನೆರವೇರಲಿದೆ.