ಜಿಲೆಬಿ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಮಾಡಿದ ಪೂಜಾ ಗಾಂಧಿ

ಗುರುವಾರ, 5 ಮೇ 2016 (15:51 IST)
ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದೇ ತಡ ನಟಿ ಪೂಜಾ ಗಾಂಧಿ ಅವರು ಫುಲ್ ಬ್ಯುಸಿಯಾಗಿದ್ದಾರೆ.ಒಂದು ಕಡೆ ದಂಡುಪಾಳ್ಯ ಪಾರ್ಟ್-2 ಸಿನಿಮಾದಲ್ಲಿ ಪೂಜಾ ಬ್ಯುಸಿಯಾಗಿದ್ರೆ ಇನ್ನೊಂದು ಕಡೆ ಅವರು ಜುಲೆಬಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ಸಿನಿಮಾದ ಚಿತ್ರೀಕರಣವನ್ನು ಪೂಜಾ ಗಾಂಧಿ ಅವರು ಕಂಪ್ಟ ಮಾಡಿದ್ದಾರೆ.
ಪೂಜಾ ಗಾಂಧಿ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಅವರಿಗೆ ಜಿಲೆಬಿ ಸಿನಿಮಾದಲ್ಲಿ ಅಭಿನಯಿಸೋದಕ್ಕೆ ಆಫರ್ ಬಂದಿತ್ತು. ವಿಭಿನ್ನ ಸಿನಿಮಾ ಅನ್ನೋ ಕಾರಣಕ್ಕೆ ಪೂಜಾ ಗಾಂಧಿ ಸಿನಿಮಾದಲ್ಲಿ ಅಭಿನಯಿಸೋದಕ್ಕೆ ಒಪ್ಪಿಕೊಂಡಿದ್ದರು.
 
ಇದೀಗ ಈ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಪೂಜಾ ಗಾಂಧಿ ಅವರು ಫುಲ್ ಖುಷಿಯಾಗಿದ್ದಾರೆ.ಅಂದ್ಹಾಗೆ ಜಿಲೆಬಿ ಸಿನಿಮಾದಲ್ಲಿ ಪೂಜಾ ಗಾಂಧಿ ಅವರು ಮೂರು ವಿಭಿನ್ನವಾದ ಪಾತ್ರಗಳನ್ನು ಮಾಡಿದ್ದಾರಂತೆ. ಆದ್ರೆ ಅವರದ್ದು ಕೇವಲ ಹಾಸ್ಯಪ್ರಧಾನ ಪಾತ್ರವಲ್ಲವಂತೆ. ಎಲ್ಲಾ ಪಾತ್ರಗಳು ಅವರು ಈ ಹಿಂದೆ ನಿರ್ವಹಿಸದೇ ಇರುವಂತಹ ಪಾತ್ರಗಳಂತೆ.
 
ಇನ್ನು ಜಿಲೆಬಿ ಸಿನಿಮಾವನ್ನು ಲಕ್ಕಿ ಶಂಕರ್ ಅವರು ನಿರ್ದೇಶನ ಮಾಡಿದ್ದಾರೆ.ಶಿವಶಂಕರ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಶಿವಶಂಕರ್ ಅವರು ಈ ಹಿಂದೆ ದೇವ್ರಾಣೆ ಹಾಗೂ ಸಿಗರೇಟ್ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಇದೀಗ ಜಿಲೆಬಿ ಸಿನಿಮಾದ ಬಗ್ಗೆಯೂ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳಿವೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ