ಮತ್ತೊಂದೆಡೆ ಯುವರಾಜ್ ಸಿಂಗ್ ಮದುವೆಯಾದ್ರೆ ಗಿಫ್ಟ್ ಕೊಡಲು ರೆಡಿ ಮಾಡಿದ್ದಾರಂತೆ ಪ್ರೀತಿ ಜಿಂಟಾ. ಅವರ ಮದುವೆ ವಿಷ್ಯ ಕೇಳಿ ನನಗೆ ಸಂತೋಷವಾಗಿದೆ, ನಮ್ಮಿಬ್ಬರ ಫ್ರೆಂಡ್‌ಶಿಪ್ ಚೆನ್ನಾಗಿದೆ. ಯುವರಾಜ್ ಸಿಂಗ್ ನಮ್ಮ ತಂಡದಲ್ಲಿ ಇದ್ದವರು ಎಂದು ಈ ಹಿಂದೆ ಹೇಳಿದ್ದಳು ಡಿಂಪಲ್ ಗರ್ಲ್.
ಕಳೆದ ವರ್ಷ ಯುವರಾಜ್ ಸಿಂಗ್ ಬಾಲಿವುಡ್ ನಟಿ ಹೆಜಲ್ ಕಿಚ್ ಜತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಶೀಫ್ರದಲ್ಲೇ ಇಬ್ಬರು ಮದುವೆಯಾಗಲಿದ್ದಾರೆ. ನಟಿ ಪ್ರೀತಿ ಜಿಂಟಾ ಕಳೆದ ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಹಿಂದೆ ಯುವರಾಜ್ ಸಿಂಗ್ ಹಾಗೂ ಪ್ರೀತಿ ಜಿಂಟಾ ಮಧ್ಯೆ ಅಫೇರ್ ಬಗ್ಗೆ ಹೇಳಲಾಗ್ತಿತ್ತು. ಆದರೆ ತಮ್ಮ ಮಧ್ಯೆ ಇರುವ ರಿಲೆಷಿನ್‌ಶಿಪ್ ಬಗ್ಗೆ ಯಾವತ್ತು ಬಾಯಿ ಬಿಟ್ಟಿರಲಿಲ್ಲ.