ಹಾರ್ಡ್ ವರ್ಕ್ ಮಾಡ್ತಿದ್ದಾರಂತೆ ಕಾಜಲ್ ಅಗರ್‌ವಾಲ್

ಮಂಗಳವಾರ, 10 ಮೇ 2016 (13:57 IST)
ಕಾಜಲ್ ಅಗರ್‌ವಾಲ್ ಹಿಂದಿ ಚಿತ್ರ 'ದೋ ಲಫ್ಜೋ ಕೀ ಕಹಾನಿ' ಚಿತ್ರದಲ್ಲಿ  ತುಂಬಾ ಹಾರ್ಡ್ ವರ್ಕ್ ಮಾಡ್ತಿದ್ದಾರಂತೆ..ಈ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಕಾಜಲ್ ಅಗರ್‌ವಾಲ್ ಜತೆಗೆ ಕಾಣಿಸಿಕೊಳ್ಳಲಿದ್ದಾರೆ ರಂದಿಪ್ ಹೂಡಾ..

ಯೆಸ್, ಕಾಜಲ್ ಈ ಚಿತ್ರದ ತಮ್ಮ ಅಭಿನಯಕ್ಕಾಗಿ ತುಂಬಾ ಸಿರಿಯಸ್ ಆಗಿ ಕೆಲಸ ಮಾಡ್ತಿದ್ದಾರಂತೆ. ಹೀಗಂತ ಕಾಜಲ್ ಹೇಳಿಕೊಂಡಿದ್ದಾರೆ. ಪಾತ್ರಕ್ಕಾಗಿ ತುಂಬಾ ಪ್ರಯತ್ನ ಪಟ್ತಿರೋ ಕಾಜಲ್ ಅಗರ್‌ವಾಲ್ ಅಂಧ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ತುಂಬಾ ಚೆಲೆಂಜಿಗ್ ಪಾತ್ರ ಎಂದು ಹೇಳಿದ್ದಾರೆ.
 
ಅದಲ್ಲದೇ ಕಾಜಲ್ ವರ್ಕ್‌ಶಾಪ್ ಹಾಗೂ ಸ್ಪೆಷಲ್ ಕ್ಲಾಸ್‌ಗಳಿಗೆ ಅಟೆಂಡ್ ಆಗಿದ್ದಾರಂತೆ... ಹಾಗೇ ಬ್ಲೈಡ್ ಮಹಿಳೆ ಅದ್ಯಾವ ರೀತಿ  ಬಳಕೆ ಸ್ಟಿಕ್ ಮಾಡಬೇಕು ಅಂತ ಅಂಧರನ್ನು ನೋಡಿ ಕಲಿಯುತ್ತಿದ್ದಾರಂತೆ. ಬ್ಲೈಡ್ ಜನರ ಸ್ಪೆಷಲ್ ಬಗ್ಗೆ ತಿಳಿದುಕೊಳ್ಳುತ್ತಿದ್ದಾರಂತೆ ಕಾಜಲ್ ಅಗರ್‌ವಾಲ್, 

ಬ್ರಹ್ಮೋತ್ಸವಮ್ ಚಿತ್ರದಲ್ಲಿ ನಟಿ ಕಾಜಲ್ ಅಗರ್‌ವಾಲ್ ನಟಿಸುತ್ತಿದ್ದಾರೆ.  ಸಮಕಾಲೀನ ಒಬ್ಬ ಹೊಸ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಚಿತ್ರದಲ್ಲಿ ನಾನು ಜೀನ್ಸ್, ಸ್ಕರ್ಟ್ ಧರಿಸಿಕೊಂಡು ಸಹಜವಾಗಿ ಕಾಣಿಸಿಕೊಂಡಿದ್ದೇನೆ ಎಂದು ತಿಳಿಸಿದ್ದರು ಕಾಜಲ್ ಅಗರ್‌ವಾಲ್. 
 
ಇನ್ನೂ ಮಹೇಶ್ ಬಾಬು ಜತೆಗೆ ಕಾಜಲ್ ನಟಿಸುತ್ತಿರುವುದು ಎರಡನೇಯ ಚಿತ್ರವಂತೆ. ಹೀಗಾಗಿ ಮಹೇಶ್ ಬಾಬು ಜತೆಗೆ ಡ್ಯೂಯೇಟ್ ಹಾಡುವುದು ಖುಷಿ ತಂದಿದೆಯಂತೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ