ಸೌಂದರ್ಯದ ಗುಟ್ಟು ಬಿಚ್ಚಿಟ್ಟ ಕಾಜೋಲ್

ಶನಿವಾರ, 24 ಡಿಸೆಂಬರ್ 2022 (16:43 IST)
90ರ ದಶಕದ ಬಾಲಿವುಡ್ ಸಿನಿರಸಿಕರ ನೆಚ್ಚಿನ ನಟಿ ಕಾಜೋಲ್. 'ಬಾಜೀಗರ್', 'DDLJ' ರೀತಿಯ ಹಿಟ್ ಸಿನಿಮಾಗಳಿಂದ ಮನೆಮಾತಾದ ಚೆಲುವೆ. ಸದ್ಯ ಕಾಜೋಲ್ ತಮ್ಮ ಸೌಂದರ‍್ಯದ ಗುಟ್ಟು ರಟ್ಟು ಮಾಡಿದ್ದಾರೆ. ಆಕೆಯ ಸೌಂದರ‍್ಯಕ್ಕೆ ಮಾರು ಹೋಗದವರಿಲ್ಲ. "ಚರ್ಮದ ಮೇಲೆ ಪ್ರಯೋಗ ಬೇಡ ಎಲ್ಲಾ ನ್ಯಾಚುರಲ್ ಆಗಿ ಇರಲಿ. ದಿನಕ್ಕೆ ಕನಿಷ್ಠಪಕ್ಷ 8 ಲೋಟ ನೀರು ಕುಡಿಯಬೇಕು. ಅದು ದೇಹದ ಸೌಂದರ‍್ಯಕ್ಕೂ ಅವಶ್ಯಕ. ಎರಡನೆಯದು ಆಹಾರ. ಮೂರನೇಯದು ಒಳ್ಳೆ ನಿದ್ರೆ. ಊಟದ ವಿಚಾರದಲ್ಲಿ ಕಾಂಪ್ರಮೈಸ್ ಆದರೂ ನಿದ್ರೆ ವಿಚಾರದಲ್ಲಿ ಆಗುವುದಿಲ್ಲ ಎಂದಿದ್ದಾರೆ. ನಾನು ಕನಿಷ್ಠ10 ಗಂಟೆಗಳ ಕಾಲ ನಿದ್ರೆ ಮಾಡುತ್ತೇನೆ. ಇದೆಲ್ಲಾ ನಮ್ಮ ತಾಯಿ ನನಗೆ ಹಾಗೂ ನನ್ನ ತಂಗಿಗೆ ನೀಡಿದ ಬ್ಯೂಟಿ ಟಿಪ್ಸ್ ಎಂದು ಕಾಜೋಲ್ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ