ದೀಪಿಕಾ ಬೋಲ್ಡ್ ಹಾಡಿನಿಂದ ರೊಚ್ಚಿಗೆದ್ದ ಜನ: ಪಠಾಣ್ ಸಿನಿಮಾಗೆ ಬಾಯ್ಕಾಟ್ ಭೀತಿ

ಬುಧವಾರ, 14 ಡಿಸೆಂಬರ್ 2022 (09:12 IST)
Photo Courtesy: Twitter
ಮುಂಬೈ: ಪಠಾಣ್ ಸಿನಿಮಾದ ಬೇಶರಂ ರಂಗ್ ಹಾಡು ಮೊನ್ನೆಯಷ್ಟೇ ಬಿಡುಗಡೆಯಾಗಿತ್ತು. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ-ಶಾರುಖ‍್ ಖಾನ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಹಾಡು ನೋಡಿದ ಮಂದಿ ದೀಪಿಕಾ ಬಿಚ್ಚಮ್ಮನ ಅವತಾರ ನೋಡಿ ಹಿಗ್ಗಾ ಮುಗ್ಗಾ ಟ್ರೋಲ್ ಮಾಡಿದ್ದರು. ಅದರ ಬೆನ್ನಲ್ಲೇ ಮತ್ತೊಂದು ಕಿರಿಕ್ ಎದುರಾಗಿದೆ.

ಹಾಡಿನಲ್ಲಿ ದೀಪಿಕಾ ಹಿಂದೂಗಳ ಸಂಕೇತವಾದ ಕೇಸರಿ ವಸ್ತ್ರ ಧರಿಸಿದ್ದರೆ, ಶಾರುಖ್ ಖಾನ್ ಮುಸಲ್ಮಾನರ ಸಂಕೇತವಾದ ಹಸಿರು ಬಟ್ಟೆ ತೊಟ್ಟಿದ್ದಾರೆ. ಕೇಸರಿ ತುಂಡುಡುಗೆಯಲ್ಲಿ ದೀಪಿಕಾ ಕುಣಿದಿದ್ದು ಕೆಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಇದು ಹಿಂದೂಗಳ ಭಾವನೆಗೆ ಧಕ್ಕೆ ತರಲೆಂದೇ ಚಿತ್ರಿಸಲಾಗಿದೆ ಎಂಬುದು ನೆಟ್ಟಿಗರ ಆರೋಪ. ಈ ಕಾರಣಕ್ಕೆ ಚಿತ್ರ ಬಹಿಷ್ಕರಿಸಲು ಕರೆ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ