ಕತುವಾ ಅತ್ಯಾಚಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ನಟ ಕಮಲ್ ಹಾಸನ್
ಶನಿವಾರ, 14 ಏಪ್ರಿಲ್ 2018 (15:49 IST)
ಚೆನ್ನೈ : ಜಮ್ಮು ಕಾಶ್ಮೀರದಲ್ಲಿ ದೇವಸ್ಥಾನದೊಳಗೇ ಏಳು ವರ್ಷದ ಪುಟ್ಟ ಹೆಣ್ಣು ಮಗುವಿನ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಘಟನೆಯನ್ನು ನೆನೆದು ಇದೀಗ ಖ್ಯಾತ ನಟ ಕಮಲ್ ಹಾಸನ್ ಅವರು ಈ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹೆಣ್ಣು ಮಗುವಿನ ರೌಧ್ರ ಸಾವಿನ ವಿರುದ್ಧ ಅನೇಕರು ಕಿಡಿಕಾರಿದ್ದು, ಇದೀಗ ನಟ ಕಮಲ್ ಹಾಸನ್ ಅವರು ಕೂಡ ಈ ಮಗುವಿನ ಸಾವಿಗೆ ಕಾರಣರಾದವರಿಗೆ ಸೂಕ್ತ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ನಟ ಕಮಲ್ ಹಾಸನ್ ಅವರು,’ ಇಂಥಾ ಘಟನೆ ಭಾರತಕ್ಕೆ ಶೋಭೆ ತರುವಂಥಾದ್ದಲ್ಲ. ನಂಬಿಕೆ ಮತ್ತು ಶ್ರದ್ಧಾ ಭಕ್ತಿಯ ಕೇಂದ್ರವಾದ ದೇವಸ್ಥಾನದೊಳಗೆ ಇಂಥಾದ್ದೊಂದು ಭೀಭತ್ಸ ಘಟನೆ ನಡೆದಿರೋದು ಆಘಾತಕಾರಿ. ಈ ಮಗುವಿನ ಮೇಲಾಗಿರೋ ರಾಕ್ಷಸೀಯ ದೌರ್ಜನ್ಯದ ವಿರುದ್ಧ ಹೋರಾಟದಲ್ಲಿ ತಾವೂ ಭಾಗಿಯಾಗೋದಾಗಿ ಕಮಲ್ ಹೇಳಿಕೊಂಡಿದ್ದಾರೆ. ಜೊತೆಗೆ `ನೀನೂ ನನ್ನ ಮಗುವಿದ್ದಂತೆಯೇ, ಆದರೆ ನಿನ್ನನ್ನು ಉಳಿಸಿಕೊಳ್ಳಲಾಗದ ಬಗ್ಗೆ ದುಃಖವಿದೆ' ಎಂದು ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ