ಜರ್ಮನಿಯಲ್ಲಿ ಕಂಗನಾ ಹ್ಯಾಪಿ ವೆಕೇಷನ್

ಬುಧವಾರ, 18 ಮೇ 2016 (15:03 IST)
ಬಾಲಿವುಡ್ ನಟಿ ಕಂಗನಾ ಜರ್ಮನಿಯಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ.  ಆದ್ರೆ ಆಸ್ಟ್ರೀಯಾದಲ್ಲಿ ಅವರು ವೆಕೇಷನ್‌ನಲ್ಲಿದ್ದಾರೆ ಎಂದು ಹೇಳಲಾಗ್ತಿತ್ತು.. ಸದ್ಯಕ್ಕೆ ಕ್ವೀನ್ ನಟಿ  ಆಸ್ಟ್ರೀಯಾದಲ್ಲಿಲ್ಲ.. ಕಂಗನಾ ಜರ್ಮನಿಯಲ್ಲಿದ್ದಾಳೆ.
ರಾಷ್ಟ್ರೀಯ ಪ್ರಶಸ್ತಿ ಪಡೆದ ಬಳಿಕ ಕಂಗನಾ ಬ್ರಿಟಿಷ್ ದೇಶದಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿರುವುದು ಖಚಿತವಾಗಿದೆ. ಜತೆಗೆ ಕಂಗನಾ ಸಹೋದರಿ ರಂಗೋಲಿ ಸಹ ಪ್ರಯಾಣ ಬೆಳೆಸಿದ್ದಾರೆ. 
 
ಜರ್ಮನಿ ಕ್ಯಾಪಿಟಲ್‌ನಲ್ಲಿ ಸುತ್ತಾಡುತ್ತಿರುವ ಫೊಟೋಗಳನ್ನು ಇಲ್ಲಿ ಕಾಣಬಹುದು... ಹೃತಿಕ್ ಜತೆಗಿನ ವಾರ್ ಬಳಿಕ ಕೆಲ ಸಮಯವನ್ನು ಕಳೆಯಲು ಕಂಗನಾ ಜರ್ಮನಿಗೆ ಪ್ರಯಾಣ ಬೆಳೆಸಿದ್ದಾಳೆ ಎಂದು ಹೇಳಲಾಗ್ತಿದೆ. 10 ದಿನಗಳ ವರೆಗೆ ಜರ್ಮನಿಯಲ್ಲೇ ಇರಲಿದ್ದಾರೆ.

ಕಂಗನಾ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ್ದರು. ಕಂಗನಾ ರಣಾವತ್ ಅವರ ಕಾಮಿಡಿ ಡ್ರಾಮಾ ಆಧಾರಿತ ಚಿತ್ರ ತನು ವೆಡ್ಸ್ ಮನು ರಿಟರ್ನ್ ಚಿತ್ರಕ್ಕಾಗಿ ಕಂಗನಾಗೆ ಪ್ರಶಸ್ತಿ ಲಭಿಸಿತ್ತು.

ಈ ಪ್ರಶಸ್ತಿ ಕಂಗನಾಗೆ ಮೂರನೇ ಟ್ರೋಫಿ ಆಗಲಿದೆ. ಈ ಚಿತ್ರದಲ್ಲಿ ಕಂಗಾನಾಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿರುವುದು ಹೆಮ್ಮೆಯ ಸಂಗತಿ.


ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ