ಚಿತ್ರದ ಕುರಿತು ವಿಶಿಷ್ಟ ರೀತಿಯಲ್ಲಿ ಹೇಳಿಕೊಂಡ ಅಶ್ವಿನಿ ಐಯರ್ ಕಂಗನಾ ರಣಾವತ್, ನೀನಾ ಗುಪ್ತಾ ಮತ್ತು ಜಸ್ಸಿ ಗಿಲ್ ಹಾಗೂ ಅವರ ಕುಟುಂಬದವರಿರುವ ಸ್ನ್ಯಾಪ್‌ಶಾಟ್ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಜೊತೆಗೆ "ನನ್ನ ಪ್ರೀತಿಪಾತ್ರರು ನನ್ನ ಮೇಲಿಟ್ಟ ನಂಬಿಕೆಯೇ ನನ್ನಲ್ಲಿ ಪ್ರತಿಫಲನವಾಗಿದೆ. ಕಂಗನಾ ರಣಾವತ್, ಜಸ್ಸಿ ಗಿಲ್, ನೀನಾ ಗುಪ್ತಾ, ನಿರ್ಮಾಪಕ ಸಂಸ್ಥೆ ಫೋಕ್ಸ್ ಸ್ಟಾರ್ ಹಿಂದಿ "ಪಂಗಾ" ಚಿತ್ರದ ಬೆಂಬಲಕ್ಕಿದ್ದಾರೆ. 2019 ರಲ್ಲಿ ಚಿತ್ರ ತೆರೆ ಕಾಣಲಿದೆ. ಎಂದು ಸಹ ಬರೆದಿದ್ದಾರೆ.
ಈ ಚಿತ್ರವು ಪ್ರೇಕ್ಷಕರಲ್ಲಿ ನಗು, ಅಳು, ಕನಸುಗಳು ಎಲ್ಲವನ್ನು ಒಟ್ಟಿಗೆ ತರಲಿದೆ ಎಂದೆ ನಿರ್ಮಾಣ ಸಂಸ್ಥೆ ಫೋಕ್ಸ್ ಸ್ಟಾರ್ ಹಿಂದಿ ಹೇಳಿಕೆ ನೀಡಿದೆ.
ಚಿತ್ರದಲ್ಲಿ ಕಬಡ್ಡಿ ಆಟಗಾರ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಕಂಗನಾ "ಅಶ್ವಿನಿ ಪಾಂಗಾ ಕಥೆಯನ್ನು ನಿರೂಪಿಸಿದಾಗ, ನನಗೆ ಬಹಳ ಇಷ್ಟವಾಯಿತು. ನನ್ನ ಕಷ್ಟ ಸುಖದಲ್ಲಿ ನನ್ನ ಕುಟುಂಬವು ಯಾವಾಗಲೂ ನನ್ನ ಬೆಂಬಲಕ್ಕೆ ನಿಲ್ಲುತ್ತದೆ. ಈ ಚಿತ್ರದ ಭಾವನೆಗಳು ನಿಜವಾಗಿಯೂ ನನ್ನ ಜೀವನಕ್ಕೆ ಸಂಬಂಧಿಸಿದೆ. ಜೊತೆಗೆ ಅಶ್ವಿನಿಯ ಕಥೆಗಳು ವಿಭಿನ್ನ ಶೈಲಿಯ ಚಿತ್ರಗಳಿಗಾಗಿ ಹೆಸರುವಾಸಿಯಾಗಿದೆ. ನಾನು ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ್ತಿಯ ಪಾತ್ರವನ್ನು ಮಾಡುತ್ತೀರುವುದರಿಂದ ಇದು ನನಗೆ ದುಪ್ಪಟ್ಟು ವಿಶೇಷವಾಗಿದೆ." ಎಂದು ಹೇಳಿದ್ದಾರೆ.