ಗಾಯಕಿ ಕನಿಕಾ ಕಪೂರ್ ಬಿಟ್ಟು ತೆರಳದ ಕರೋನಾ ಮಾರಿ

ಬುಧವಾರ, 1 ಏಪ್ರಿಲ್ 2020 (09:43 IST)
ಮುಂಬೈ: ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಗೆ ಐದನೇ ಬಾರಿಯ ಪರೀಕ್ಷೆಯಲ್ಲೂ ಕೊರೋನಾ ಗುಣಮುಖವಾಗಿಲ್ಲ ಎಂಬ ಫಲಿತಾಂಶ ಬಂದಿದೆ.


ವಿದೇಶದಿಂದ ಬಂದ ಬಳಿಕ ಪಾರ್ಟಿ ಆಯೋಜಿಸಿ ಹಲವರಲ್ಲಿ ಆತಂಕ ತಂದಿದ್ದ ಕನಿಕಾ ವಿರುದ್ಧ ಪ್ರಕರಣವೂ ದಾಖಲಾಗಿತ್ತು. ಮೊನ್ನೆಯಷ್ಟೇ ಭಾವುಕರಾಗಿ ತಮ್ಮ ಸ್ಥಿತಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದ ಕನಿಕಾ ಈಗಲಾದರೂ ಫಲಿತಾಂಶ ನೆಗೆಟಿವ್ ಎಂದು ಬರಲಿ ಎಂದು ಪ್ರಾರ್ಥಿಸಿದ್ದರು.

ಆದರೆ ಅವರ ಪ್ರಾರ್ಥನೆ ಫಲಗೂಡಲಿಲ್ಲ. ಐದನೇ ಬಾರಿಯ ಫಲಿತಾಂಶದಲ್ಲೂ ಪೊಸಿಟಿವ್ ರಿಸಲ್ಟ್ ಬಂದಿದ್ದು, ಕೊರೋನಾದಿಂದ ಇನ್ನೂ ಗುಣಮುಖರಾಗಿಲ್ಲ ಎಂದು ಬಂದಿದೆ. ಹೀಗಾಗಿ ಅವರು ಸಾಮಾಜಿಕ ಅಂತರ ಇನ್ನೂ ಮುಂದುವರಿಸಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ