ಸಲ್ಮಾನ್ ಖಾನ್ ನಟನೆಯ ‘ಟೈಗರ್ ಜಿಂದಾ ಹೈ’ ಚಿತ್ರಕ್ಕೆ ಪಾಕಿಸ್ತಾನದಲ್ಲಿ ವಿರೋಧವಿದ್ದರೂ, ಸಿನಿಮಾ ನೋಡಿದ ಅಭಿಮಾನಿಗಳು!
ಗುರುವಾರ, 22 ಮಾರ್ಚ್ 2018 (06:16 IST)
ಮುಂಬೈ : ಇತ್ತಿಚೆಗಷ್ಟೇ ಬಿಡುಗಡೆಯಾದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ನಟಿಸಿದ ‘ಟೈಗರ್ ಜಿಂದಾ ಹೈ’ ಚಿತ್ರಕ್ಕೆ ಪಾಕಿಸ್ತಾನದಲ್ಲಿ ವಿರೋಧ ವ್ಯಕ್ತವಾಗಿದ್ದರೂ ಕೂಡ ಅಲ್ಲಿರುವ ಅವರ ಅಭಿಮಾನಿಗಳು ಈ ಚಿತ್ರವನ್ನು ವೀಕ್ಷಿಸಿದ್ದಾರಂತೆ.
‘ಟೈಗರ್ ಜಿಂದಾ ಹೈ’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 320.34 ಕೋಟಿ ರೂಪಾಯಿ ಕಲೆಕ್ಷನ್ ಗಳಿಸಿ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂದು ಪ್ರಸಿದ್ದಿ ಪಡೆದಿತ್ತು. ಆದರೆ ಈ ಸಿನಿಮಾವನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡಬಾರದೆಂದು ಅಲ್ಲಿನವರು ವಿರೋಧ ವ್ಯಕ್ತಪಡಿಸಿದ್ದರು.
ಆದರೆ ಅಲ್ಲಿರುವ ಸಲ್ಮಾನ್ ಖಾನ್ ಅಭಿಮಾನಿಗಳು ಮಾತ್ರ ಚಿತ್ರಕ್ಕೆ ವಿರೋಧವಿದ್ದರೂ ಕೂಡ ಲಾಹೋರ್ ನಲ್ಲಿ ಅಧಿಕ ಮೊತ್ತದ ಹಣವನ್ನು ನೀಡಿ ಪ್ರೈವೇಟ್ ಸ್ಕ್ರೀನಿಂಗ್ ಬುಕ್ ಮಾಡಿ ಯು ಎಸ್ ಬಿ ಮೂಲಕ ಡಿಜಿಟಲ್ ಸಿನೆಮಾ ಪ್ರೊಜೆಕ್ಟರ್ ನಲ್ಲಿ ಎಲ್ಲರೂ ಸಿನಿಮಾವನ್ನು ವೀಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ