ಮಾಜಿ ಗೆಳೆಯ ಶಾಹೀದ್‌ಗೆ ಅಪ್ಪುಗೆ ನೀಡಿ, ಹರಟೆ ಹೊಡೆದ ಕರೀನಾ ಕಪೂರ್‌, ವಿಡಿಯೋ ವೈರಲ್

Sampriya

ಶನಿವಾರ, 8 ಮಾರ್ಚ್ 2025 (17:56 IST)
Photo Courtesy X
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾಲಿವುಡ್‌ನ ಮಾಜಿ ಕಪಲ್‌ಗಳಾದ ಕರೀನಾ ಕಪೂರ್‌ ಖಾನ್ ಹಾಗೂ ಶಾಹಿದ್ ಕಪೂರ್ ಅವರ ಇವೆಂಟ್‌ವೊಂದರಲ್ಲಿ ಅಪ್ಪುಗೆಯ ವಿಡಿಯೋವೊಂದು ವೈರಲ್ ಆಗುತ್ತಿದೆ.

ಒಂದು ಕಾಲದಲ್ಲಿ ಪ್ರಣಯ ಪಕ್ಷಿಗಳ ಹಾಕಿದ್ದ ಕರೀನಾ ಕಪೂರ್ ಹಾಗೂ ಶಾಹಿದ್ ಕಪೂರ್ ಅವರು ಕೆಲ ಕಾರಣಗಳಿಂದ ದೂರವಾದರು. ಶಾಹಿದ್ ಅವರು 2015ರಲ್ಲಿ ಮಿರಾ ರಜ್‌ಪೂತ್‌ ಅವರನ್ನು ಹಾಗೂ ಕರೀನಾ ಕಪೂರ್ ಅವರು ನಟ ಸೈಫ್ ಅಲಿ ಖಾನ್ ಅವರನ್ನು ಮದುವೆಯಾದರು.

ಬಾಲಿವುಡ್‌ನಲ್ಲಿ ಒಂದು ಸಮಯದಲ್ಲಿ ಕರೀನಾ ಹಾಗೂ ಶಾಹಿದ್ ಕಪೂರ್ ಅವರು ಪ್ರೀತಿಯ ವಿಚಾರ ತುಂಬಾ ಜೋರಾಗಿ ಸದ್ದು ಮಾಡಿತ್ತು. ತಮ್ಮಿಬ್ಬರ ನಡುವಿನ ಪ್ರೀತಿಯನ್ನು ಇನ್‌ಡೈರೆಕ್ಟ್‌ ಆಗಿ ಇವರಿಬ್ಬರು ತೋರಿಸುಕೊಳ್ಳುತ್ತಿದ್ದರು. ಈ ಜೋಡಿ ಮದುವೆಯಾಗುತ್ತೇ ಎನ್ನುವ ಸುದ್ದಿ ಇರುವಾಗಲೇ ಇವರಿಬ್ಬರ ಬ್ರೇಕಪ್ ವಿಚಾರ ಅವರ ಅಭಿಮಾನಿಗಳಿಗೆ ಬೇಸರವಾಗಿತ್ತು.

ಆದರೆ ಇದೀಗ ಈ ಜೋಡಿ ಸಿನಿಮಾ ಇವೆಂಟ್‌ನಲ್ಲಿ ಒಟ್ಟಾಗಿ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.  ಶಾಹಿದ್‌ರನ್ನು ಕರೀನಾ ತಬ್ಬಿ ಶುಭಕೋರಿ, ಕ್ಯಾಶುವಲ್‌ ಆಗಿ ಮಾತುಕತೆ ನಡೆಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

Awww jab Kareena and Shahid met warmly at #IIFA2025 ???????? pic.twitter.com/Tni5MzFCcY

— ✨️ (@daalchaawal_) March 8, 2025

ಇದೇ ಇವೆಂಟ್‌ನಲ್ಲಿ ಕಾರ್ತಿಕ್ ಆರ್ಯನ್, ಕರಣ್ ಜೋಹರ್, ಕೃತಿ ಸನೋನ್ ಮತ್ತು ಮಾಧುರಿ ದೀಕ್ಷಿತ್ ಸೇರಿದಂತೆ ಇತರರು ಇದ್ದರು. ಆದಾಗ್ಯೂ, ಎಲ್ಲರ ಗಮನ ಸೆಳೆದದ್ದು ಕರೀನಾ ಮತ್ತು ಶಾಹಿದ್ ಅವರ ಪ್ರೀತಿಯ ಅಪ್ಪುಗೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ