ಕತ್ರೀನಾ ಕೈಫ್ ಮನೆಗೆ ಭೇಟಿ ನೀಡಿದ್ರಾ ರಣ್ ಬೀರ್ ಕಪೂರ್

ಸೋಮವಾರ, 8 ಆಗಸ್ಟ್ 2016 (08:56 IST)
ರಣ್ ಬೀರ್ ಕಪೂರ್ ಹಾಗೂ ಕತ್ರೀನಾ ಕೈಫ್ ಅವರು ಪರಸ್ಪರ ದೂರವಾಗಿ ಆರೇಳು ತಿಂಗಳುಗಳೇ ಕಳೆದು ಹೋಗಿವೆ. ಪರಸ್ಪರ ದೂರವಾದ ಬಳಿಕ ಇಬ್ಬರಿಗೂ ಮುಖಾಮುಖಿಯಾಗೋದಕ್ಕೂ ಹಿಂದೇಟು ಹಾಕುತ್ತಿದ್ದಾರೆ ಅನ್ನೋ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಜಗ್ಗ ಜಾಸೂಸ್ ಸಿನಿಮಾ ಸೆಟ್ ನಲ್ಲೂ ಇಬ್ಬರೂ ದೂರನೇ ಉಳಿದಿದ್ದರು. ಆದ್ರೀಗ ಅಭಿಮಾನಿಗಳು ಅಚ್ಚರಿ ಪಡುವಂತಹ ಸುದ್ದಿಯೊಂದು ಕೇಳಿ ಬರುತ್ತಿದೆ.


ಬ್ರೇಕ್ ಅಪ್ ಬಳಿಕ ರಣ್ ಬೀರ್ ಹಾಗೂ ಕತ್ರೀನಾ ಕೈಫ್ ಪಾರ್ಟಿಗಳಲ್ಲಿಯೂ ಜೊತೆಯಾಗಿ ಕಾಣಿಸಿಕೊಳ್ಳೋದಕ್ಕೆ ಹಿಂದೇಟು ಹಾಕುತ್ತಿದ್ದರು. ಕತ್ರೀನಾ ಕೈಫ್ ಹೋದ ಪಾರ್ಟಿಗೆ ರಣ್ಬೀರ್ ಹೋಗುತ್ತಿರಲಿಲ್ಲ. ರಣ ಬೀರ್ ಇದ್ದ ಕಡೆ ಕತ್ರೀನಾ ಗೈರು. ಹೀಗೇ ಅವರಿಬ್ಬರು ದೂರವಾಗಿಯೇ  ಉಳಿಯೋಕೆ ಇಷ್ಟಪಡುತ್ತಿದ್ದರು.ಆದ್ರೀಗ ಬಂದ ಸುದ್ದಿಯೊಂದು ಎಲ್ಲರಿಗೂ ಶಾಕ್ ನೀಡುವಂತಿದೆ.

ಅದೇನಪ್ಪಾ ಅಂದ್ರೆ ಕತ್ರೀನಾ ಮನೆಗೆ ರಣ್ ಬೀರ್ ಕಪೂರ್ ಅವರು ಸೀಕ್ರೇಟ್ ಭೇಟಿ ನೀಡಿದ್ದಾರಂತೆ. ಇವರಿಬ್ಬರ ಆಪ್ತರೊಬ್ಬರು ಕ್ಯಾಟ್ ಮನೆಗೆ ತೆರಳಿದ್ದಾಗ  ಅಲ್ಲಿ ರಣ್ಬೀರ್ ಕಪೂರ್ ಅಅವರು ಇದ್ದರು ಅಂತಾ ಹೇಳಿದ್ದಾರೆ.

ಇನ್ನು ಆ ವ್ಯಕ್ತಿ ಮನೆಗೆ ಇದ್ದಕ್ಕಿದ್ದಂತೆ ಭೇಟಿ ನೀಡಿದಾಗ ರಣ್ಬೀರ್ ಕಪೂರ್ ತನ್ನ ಮನೆಯಲ್ಲಿದ್ದರು ಕತ್ರೀನಾ ಮಾತ್ರ ಯಾವುದೇ ರೀತಿಯ ಆತಂಕ ಪಡಲಿಲ್ಲ. ಮಾಮೂಲಿಯಾಗಿದ್ದರಂತೆ. ಹಾಗಾಗಿ ರಣ್ಬೀರ್ ಈ ಹಿಂದೆ ಕೂಡ ಅನೇಕ ಬಾರಿ ಅಲ್ಲಿಗೆ ಬಂದಿರಬಹುದು ಅಂತಾ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.ಆದ್ರೆ ಅವರಿಬ್ಬರು ಮತ್ತೆ ಒಂದಾದ್ರೆ ಚೆನ್ನಾಗಿರುತ್ತೆ ಅನ್ನೋದು ಅಭಿಮಾನಿಗಳ ಹಾರೈಕೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

ವೆಬ್ದುನಿಯಾವನ್ನು ಓದಿ