ಮೊದಲ ಸಂಪುಟದಲ್ಲಿಯೇ ಗುಡ್ ನ್ಯೂಸ್ ನೀಡಿದ ಪ್ರಧಾನಿ ಮೋದಿ

ಶನಿವಾರ, 1 ಜೂನ್ 2019 (09:20 IST)
ನವದೆಹಲಿ: ಎರಡನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೇರಿದ ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ನಿನ್ನೆ ಮೊದಲ ಸಂಪುಟ ಸಭೆ ನಡೆಸಿದ್ದು, ಮೊದಲ ಸಭೆಯಲ್ಲಿ ರೈತರಿಗೆ ಖುಷಿ ನೀಡುವ ಸುದ್ದಿ ಕೊಟ್ಟಿದೆ.


ಚುನಾವಣೆ ಸಂದರ್ಭ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ 60 ವರ್ಷ ಮೇಲ್ಪಟ್ಟ ಎಲ್ಲಾ ಅನ್ನದಾತರು, ವರ್ತಕರಿಗೆ 3 ಸಾವಿರ ರೂ. ಪಿಂಚಣಿ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಿಂದ ಮೊದಲ ಹಂತದಲ್ಲಿ 5 ಕೋಟಿ ರೈತರಿಗೆ ಪ್ರಯೋಜನವಾಗಲಿದೆ. ಇದಕ್ಕಾಗಿ 10 ಸಾವಿರ ಕೋಟಿ ವೆಚ್ಚವಾಗಲಿದೆ. ಆದರೆ ರೈತರು ಪ್ರತಿ ತಿಂಗಳು ಪ್ರೀಮಿಯರ್ ಕಟ್ಟಬೇಕಾಗುತ್ತದೆ.

ಇನ್ನು, ಕಿಸಾನ್ ಸಮ್ಮಾನ್ ಯೋಜನೆಯನ್ನು ಈ ಬಾರಿ ಎಲ್ಲಾ ರೈತರಿಗೂ ವಿಸ್ತರಿಸಲಾಗಿದೆ. ಇದರಿಂದ 14.5 ಕೋಟಿ ರೈತರಿಗೆ ಅನುಕೂಲವಾಗಲಿದೆ. ಅಲ್ಲದೆ ವಾರ್ಷಿಕ 1.5 ಕೋಟಿ ರೂ.ಗಳಿಗಿಂತ ಕಡಿಮೆ ವಹಿವಾಟು ನಡೆಸುವ ಸಣ್ಣ ವರ್ತಕರಿಗೂ ಹೊಸ ಪಿಂಚಣಿ ಯೋಜನೆ ಜಾರಿಗೊಳಿಸಲು ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ