ಸಿನಿಮಾ ಶೂಟಿಂಗ್‌ನಲ್ಲಿ ಯುವತಿ ಚೆಲ್ಲಾಟ!

ಬುಧವಾರ, 7 ಡಿಸೆಂಬರ್ 2016 (09:57 IST)
ಸಾಮಾನ್ಯವಾಗಿ ಸಿನಿಮಾ ಶೂಟಿಂಗ್ ನಡೀತಿದ್ರೆ ಅಭಿಮಾನಿಗಳು ಸುಮ್ಮನಿರಲ್ಲ. ಹೀರೋ ಹೀರೋಯಿನ್, ನಟರಿಗೆ ಬಹಳ ಕಿರಿಕಿರಿ ಕೊಡುತ್ತಿರುತ್ತಾರೆ. ಕೆಲವು ಹೀರೋ, ಹೀರೋಯಿನ್‌ಗಳು ಸಹಕರಿಸ್ತಾರೆ ಕೂಡ. 
 
ಈಗ ವಿಷಯಕ್ಕೆ ಬಂದರೆ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುಗೆ ಸಖತ್ ಫಾಲೋಯಿಂಗ್ ಇದೆ. ಕೇವಲ ಹುಡುಗರಷ್ಟೇ ಅಲ್ಲ ಹುಡುಗಿಯರಿಗೂ ಸಖತ್ ಕ್ರೇಜ್ ಇದೆ. ಈ ಹುಡುಗಿಯರ ಕನಸಿನ ರಾಜಕುಮಾರನಿಗೆ ಗುಜರಾತಿನ ಅಹಮದಾಬಾದ್‌ನಲ್ಲಿ ಒಂದು ವಿಚಿತ್ರ ಘಟನೆ ಎದುರಾಗಿದೆ.
 
ಮುರುಗದಾಸ್ ಆಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ ಸಿನಿಮಾ ಶೂಟಿಂಗ್ ಸದ್ಯಕ್ಕೆ ಅಹಮದಾಬ್‌ನಲ್ಲಿ ಭರದಿಂದ ಸಾಗುತ್ತಿದೆ. ಒಂದು ಬೈಕ್ ಚೇಸಿಂಗ್ ಸನ್ನಿವೇಶವನ್ನು ಸೆರೆಹಿಡಿದುಕೊಂಡರು. ಆ ಸೀನ್ ಮುಗಿದ ಕೂಡಲೆ ಸೆಟ್‌ನಿಂದ ಮಹೇಶ್ ತನ್ನ ಕ್ಯಾರವಾನ್‌ಗೆ ಹೊರಡುತ್ತಿದ್ದಾಗ ಯುವತಿಯೊಬ್ಬಳು ಜನರ ಗುಂಪಿನಿಂದ ಓಡಿ ಬಂದು ಮಹೇಶ್ ಬಾಬುರನ್ನು ಭೇಟಿಯಾಗುವ ಪ್ರಯತ್ನ ಮಾಡಿದ್ದಾರೆ.
 
ಸೆಕ್ಯುರಿಟಿ ತಡೆದರೂ ಬಿಟ್ಟಿಲ್ಲ. ಆಮೇಲೆ ಮಹೇಶ್ ಸಹ ಆ ಯುವತಿಯ ಅಭಿಮಾನಕ್ಕೆ ಮಾರುಹೋದರು. ಆಕೆಗೆ ಸೆಲ್ಫೀ ತೆಗೆದುಕೊಳ್ಳುವ ಅವಕಾಶ ಕೊಟ್ಟರು. ಆ ಯುವತಿಯ ಆನಂದಕ್ಕೆ ಪಾರವೇ ಇರಲಿಲ್ಲ. ಒಟ್ನಲ್ಲಿ ಹುಡುಗಿಗೆ ಚೆಲ್ಲಾಟ ಹೀರೋಗೆ ಪ್ರಾಣಸಂಕಟ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ