ಮಾದಕ ನಟಿ ಮಲ್ಲಿಕಾ ಶೆರಾವತ್ ರನ್ನು ಫ್ಲಾಟ್ ನಿಂದ ಹೊರದಬ್ಬಿದ್ದು ನಿಜವೇ?!
ಇದಕ್ಕೆ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿರುವ ಮಲ್ಲಿಕಾ ಪ್ಯಾರಿಸ್ ನಲ್ಲಿ ನಮಗೆ ಫ್ಲ್ಯಾಟ್ ಇಲ್ಲವೇ ಇಲ್ಲ ಎಂದಿದ್ದಾರೆ. ‘ದಯವಿಟ್ಟು ಈ ಸುದ್ದಿ ಪ್ರಸಾರ ಮಾಡಿದ ಮಾಧ್ಯಮ ಪ್ಯಾರಿಸ್ ನಲ್ಲಿ ನಾವಿರುವ ಫ್ಲ್ಯಾಟ್ ವಿಳಾಸ ಎಲ್ಲಿದೆಯೆಂದು ಹೇಳಲಿ. ನಾನು ಪ್ಯಾರಿಸ್ ನಲ್ಲಿ ನೆಲೆಸುತ್ತಲೇ ಇಲ್ಲ. ನನಗೆ ಅಲ್ಲಿ ಫ್ಲ್ಯಾಟ್ ಕೂಡಾ ಇಲ್ಲ. ನಾನು ಮುಂಬೈಯಲ್ಲೇ ಇದ್ದೇನೆ. ಹೀಗಿರುವಾಗ ಅನಗತ್ಯವಾಗಿ ನನ್ನ ಹೆಸರನ್ನು ಪ್ರಕರಣದಲ್ಲಿ ಸಿಲುಕಿಸುತ್ತಿರುವುದು ಏಕೆ?’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.