ವಿರಾಟ್ – ಅನುಷ್ಕಾ ಶರ್ಮಾ ಹನಿಮೂನ್ ಫೋಟೋ

ಶನಿವಾರ, 16 ಡಿಸೆಂಬರ್ 2017 (08:47 IST)
ನವದೆಹಲಿ: ಇಟೆಲಿಯಲ್ಲಿ ವಿವಾಹ ಮುಗಿಸಿ ಇದೀಗ ಹನಿಮೂನ್ ಮೂಡ್ ನಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಹನಿಮೂನ್ ಫೋಟೋ ಬಿಡುಗಡೆ ಮಾಡಿದ್ದಾರೆ.
 

ರೋಮ್ ನಲ್ಲಿ ಮಧುಚಂದ್ರಕ್ಕೆಂದು ತೆರಳಿರುವ ಜೋಡಿ ಮದುವೆ ನಂತರದ ಮೊದಲ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅನುಷ್ಕಾ ತಮ್ಮ ಖಾತೆಯಲ್ಲಿ ಫೋಟೋ ಜತೆಗೆ ‘ನಿಜವಾಗಲೂ ಸ್ವರ್ಗದಲ್ಲಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಸಂಪೂರ್ಣ ಸ್ನೋ ಫಾಲಿಂಗ್ ಪರಿಸರದಲ್ಲಿ ಇಬ್ಬರೂ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕವೇ ತಮ್ಮ ಮದುವೆಯ ದಿನವೇ ತಾವು ಮದುವೆಯಾಗಿರುವುದಾಗಿ ಘೋಷಿಸಿಕೊಂಡಿದ್ದ ಜೋಡಿ ಸದ್ಯದಲ್ಲೇ ಭಾರತಕ್ಕೆ ಮರಳಲಿದ್ದು, ರಿಸೆಪ್ಷನ್ ಇಟ್ಟುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ