ಮಲ್ಲಿಕಾ ಶೆರಾವತ್ ಮದುವೆ ರೂಮರ್ಸ್.. ತಳ್ಳಿ ಹಾಕಿದ ಮಲ್ಲಿಕಾ

ಸೋಮವಾರ, 9 ಮೇ 2016 (13:32 IST)
ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಫ್ರೆಂಚ್ ಮೂಲದ ರಿಯಲ್ ಎಸ್ಟೇಟ್‌ನ ಉದ್ಯಮಿ ಕೈರಿಲ್ ಆಕ್ಸೆನ್‌ಪ್ಯಾನ್ಸ್ ಅವರನ್ನು ಪ್ರೀತಿಸುತ್ತಿದ್ದಾರೆ. ಸದ್ಯ ಅವರ ಜತೆ ಮದುವೆಯಾಗ್ತಾರೆ ಎಂಬ ವದಂತಿಯನ್ನು ಮಲ್ಲಿಕಾ ತಳ್ಳಿ ಹಾಕಿದ್ದಾರೆ. ಕೆಲ ದಿನಗಳ ಹಿಂದೆ ಮಲ್ಲಿಕಾ ಫ್ರೆಂಚ್ ಉದ್ಯಮಿ ಜತೆ ಡೇಟಿಂಗ್ ನಡೆಸುತ್ತಿದ್ದರು. 




ಆದ್ದರಿಂದ ಮೊನ್ನೆ ಪ್ಯಾರೀಸ್‌ನಲ್ಲಿ ಬಾಯ್‌ಫ್ರೆಂಡ್ ಜತೆಗೆ ಸಿಕ್ರೇಟ್ ಆಗಿ ಮದುವೆಯಾಗಿದ್ದರು ಎಂದು ಹೇಳಲಾಗ್ತಿತ್ತು. ಅಲ್ಲದೇ ಮಲ್ಲಿಕಾ ಡೇಟಿಂಗ್ ಕೂಡ ನಡೆಸುತ್ತಿದ್ದರು.. ಕೆಲ ಫೊಟೋಗಳನ್ನು ಮಲ್ಲಿಕಾ ಶೆರಾವತ್ ಶೇರ್ ಮಾಡಿದ್ದರು.. 
 
ತಮ್ಮ ಮದುವೆ ರೂಮರ್ಸ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶೆರಾವತ್, ತಮ್ಮ ಮದುಮೆಯಾಗಿಲ್ಲ ಎಂದು ತಿಳಿಸಿದ್ದಾರೆ.

'ವದಂತಿ ಹಬ್ಬಿಸುವುದನ್ನು ನಿಲ್ಲಿಸಿ ಎಂದಿರುವ ಅವರು, ಇದು ನಿಜವಲ್ಲ, ಮದುವೆಯಾದ್ರೆ ನಾನು ನಿಮಗೆಲ್ಲ ಆಹ್ವಾನ ನೀಡ್ತೀನಿ, ಆದ್ದರಿಂದ ಪ್ಲೀಸ್, ರೂಮರ್ಸ್ ನಿಲ್ಲಿಸಿ, ನಾನು ಪ್ಯಾರಿಸ್‌ನಲ್ಲಿ ಫಿಲ್ಮಂ ಫೆಸ್ಟಿವಲ್‌ಗಾಗಿ ಇಲ್ಲಿಗೆ ಬಂದಿದ್ದೇನೆ' ಎಂದಿದ್ದಾರೆ ಮಲ್ಲಿಕಾ ಶೆರಾವತ್. 
 
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ