ಪುಲ್ವಾಮಾ ದಾಳಿ: ಪಾಕ್ ಪರ ಮಾತನಾಡಿದ್ದಕ್ಕೆ ನವಜೋತ್ ಸಿಂಗ್ ಸಿದು ವಿರುದ್ಧ ಆಕ್ರೋಶ

ಶನಿವಾರ, 16 ಫೆಬ್ರವರಿ 2019 (11:14 IST)
ನವದೆಹಲಿ: ಪುಲ್ವಾಮಾದಲ್ಲಿ ಯೋಧರ ಮೇಲೆ ಜೈಶ್ ಉಗ್ರರ ಅಟ್ಟಹಾಸದ ಬಳಿಕವೂ ಪಾಕಿಸ್ತಾನವನ್ನು ಬೆಂಬಲಿಸಿ ಮಾತನಾಡಿದ ಕಾಂಗ್ರೆಸ್ ನಾಯಕ, ಪಂಜಾಬ್ ಸಚಿವ ನವಜೋತ್ ಸಿಂಗ್ ಸಿದು ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.


ಪುಲ್ವಾಮಾ ದಾಳಿಯನ್ನು ಖಂಡಿಸಿ ಮಾತನಾಡಿದ್ದ ನವಜೋತ್ ಬಳಿಕ ಇದಕ್ಕೆ ಇಡೀ ಪಾಕಿಸ್ತಾನವನ್ನೇ ದೂರುವುದು ಸರಿಯಲ್ಲ ಎಂದಿದ್ದರು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸಿದು ಭಾಗವಹಿಸುವ ‘ಕಪಿಲ್ ಶರ್ಮಾ ಶೋ’ ಮೇಲೂ ನಿಷೇಧ ಹೇರಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಪುಲ್ವಾಮ ದಾಳಿ ಖಂಡನೀಯ. ಆದರೆ ಕೆಲವೇ ಕೆಲವು ಕೆಟ್ಟ ವ್ಯಕ್ತಿಗಳ ಕುಕೃತ್ಯಕ್ಕೆ ಇಡೀ ದೇಶವನ್ನು ದೂಷಿಸುವುದು ಸರಿಯಲ್ಲ’ ಎಂದು ಸಿದು ಹೇಳಿದ್ದರು. ಇದಕ್ಕೂ ಮೊದಲು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪದಗ್ರಹಣ ಸಮಾರಂಭಕ್ಕೆ ಹೋಗಿ ಪಾಕ್ ಸೇನಾ ನಾಯಕನನ್ನು ಸಿದು ಅಪ್ಪಿಕೊಂಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ಪಾಕ್ ಪರವಾಗಿ ಮಾತನಾಡಿದ ವಿವಾದಕ್ಕೀಡಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ