ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ ನವಾಜುದ್ದೀನ್ ಸಿದ್ದಿಕಿ: ವಿಚ್ಛೇದನಕ್ಕೆ ಕಾರಣ ನೀಡಿದ ಪತ್ನಿ
‘ನವಾಜುದ್ದೀನ್ ಯಾವತ್ತೂ ನನ್ನ ಮೇಲೆ ಕೈ ಮಾಡಿರಲಿಲ್ಲ. ಆದರೆ ಮಾನಸಿಕ ಹಿಂಸೆ ವಿಪರೀತವಾಗಿತ್ತು. ನನ್ನ ಮೇಲೆ ಕೂಗಾಡುವುದು, ನನ್ನನ್ನು ಮಾನಸಿಕವಾಗಿ ಹಿಂಸೆ ನೀಡುವುದು ಮಾಡುತ್ತಿದ್ದರು. ಅವರ ಸಹೋದರ ನನ್ನ ಮೇಲೆ ಕೈ ಮಾಡಿದ್ದ ಕೂಡಾ. ನನಗೆ ಏಕಾಂಗಿ ಎನಿಸುತ್ತಿತ್ತು. ಕಳೆದ ಮೂರು-ನಾಲ್ಕು ತಿಂಗಳಿನಿಂದ ಮಕ್ಕಳನ್ನೂ ನವಾಜುದ್ದೀನ್ ನೋಡಲು ಬಂದಿರಲಿಲ್ಲ. ಹೀಗಾಗಿ ಮಕ್ಕಳನ್ನೂ ನನ್ನ ವಶಕ್ಕೆ ಒಪ್ಪಿಸಬೇಕೆಂದು ಕೋರುತ್ತೇನೆ. ಈ ವೈವಾಹಿಕ ಬಂಧನದಲ್ಲಿ ಮುಂದುವರಿಯುವುದರಲ್ಲಿ ಅರ್ಥವಿಲ್ಲವೆನಿಸಿ ಹೊರಬಂದೆ’ ಎಂದು ಅಂಜನಾ ಹೇಳಿಕೊಂಡಿದ್ದಾರೆ.