ವಿರಾಟ್ ಕೊಹ್ಲಿ ಸಿನಿಮಾದಲ್ಲಿ ನಟಿಸ್ತಾರಂತೆ! ಆದರೆ ಹೀರೋಯಿನ್ ಇವರೇ ಆಗಿರಬೇಕಂತೆ!

ಮಂಗಳವಾರ, 19 ಮೇ 2020 (09:22 IST)
ಮುಂಬೈ: ಭಾರತದ ಹಲವು ಕ್ರಿಕೆಟಿಗರ ಜೀವನಗಾಥೆ ಸಿನಿಮಾವಾಗಿ ಮೂಡಿಬಂದಿದೆ. ಆದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಯಾರೂ ಇದುವರೆಗೆ ಸಿನಿಮಾ ಮಾಡಿಲ್ಲ.


ಒಂದು ವೇಳೆ ತಮ್ಮ ಆತ್ಮಕತೆ ಸಿನಿಮಾವಾದರೆ ಅಲ್ಲಿ ನಾನೇ ನಾಯಕನಾಗಿ ನಟಿಸುತ್ತೇನೆ ಎಂದಿದ್ದಾರೆ ಕೊಹ್ಲಿ. ಆದರೆ ನಾಯಕಿ ಮಾತ್ರ ಅನುಷ್ಕಾ ಶರ್ಮಾ ಆಗಿರಬೇಕೆಂದು ಷರತ್ತು ವಿಧಿಸಿದ್ದಾರೆ.

ಸುನಿಲ್ ಛೆಟ್ರಿ ಜತೆಗಿನ ಸಂವಾದದಲ್ಲಿ ಕೊಹ್ಲಿ ಹೀಗೊಂದು ಐಡಿಯಾ ಹೇಳಿದ್ದಾರೆ. ನನ್ನ ಪಾತ್ರವನ್ನು ನನ್ನ ಹೊರತಾಗಿ ಯಾರೂ ಮಾಡಲು ಸಾಧ‍್ಯವಿಲ್ಲ. ಹಾಗಾಗಿ ನನ್ನ ಜೀವನಗಾಥೆಯ ಸಿನಿಮಾದಲ್ಲಿ ನಾನೇ ನಾಯಕನಾಗಿರುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.

ಆದರೆ ಕೊಹ್ಲಿ ಹೀಗೆ ಹೇಳಿದ್ದು ತಮಾಷೆಗಾಗಿ. ನನ್ನ ವೃತ್ತಿ ನಟನೆಯಲ್ಲಿ. ಜಾಹೀರಾತುಗಳಲ್ಲಿ ನಟಿಸುವುದು ಸುಲಭ. ಆದರೆ ಅದನ್ನು ನೋಡಿ ನಾನು ಸಿನಿಮಾದಲ್ಲೂ ಅಭಿನಯಿಸುವೆ ಎಂದು ತಿಳಿದುಕೊಂಡರೆ ಅದು ತಪ್ಪು ಕಲ್ಪನೆಯಾಗುತ್ತದೆ. ನಾನು ಪಕ್ಕಾ ಕ್ರಿಕೆಟಿಗನಷ್ಟೇ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ