ಯಶ್ ಟಾಕ್ಸಿಕ್ ಸಿನಿಮಾದ ಶೂಟಿಂಗ್‌ಗಾಗಿ ಮುಂಬೈಗೆ ಬಂದ ನಯನತಾರಾ

Sampriya

ಗುರುವಾರ, 3 ಏಪ್ರಿಲ್ 2025 (19:46 IST)
Photo Courtesy X
ಮುಂಬೈ: ಕೆಜಿಎಫ್‌ ಸ್ಟಾರ್‌ ಯಶ್ ಅವರು ನಾಯಕನಾಗಿ ನಟಿಸುತ್ತಿರುವ ಟಾಕ್ಸಿಕ್ ಸಿನಿಮಾದ ಶೂಟಿಂಗ್‌ ಭರದಿಂದ ಸಾಗುತ್ತಿದೆ. ಇದೀಗ ಸಿನಿಮಾದ ಶೂಟಿಂಗ್‌ಗಾಗೊ ನಟಿ ನಯನತಾರಾ ಅವರು ಮುಂಬೈಗೆ ಆಗಮಿಸಿದ್ದಾರೆ.

ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಟಾಕ್ಸಿಕ್' ಸಿನಿಮಾ ಭಾರೀ ನಿರೀಕ್ಷೆಗಳೊಂದಿಗೆ ತಯಾರಾಗುತ್ತಿದೆ. ಕರೀನಾ ಕಪೂರ್ ಖಾನ್ ಬದಲಿಗೆ ಚಿತ್ರತಂಡಕ್ಕೆ ಸೇರ್ಪಡೆಗೊಂಡ ನಟಿ ನಯನತಾರಾ ಅವರು ಇದೀಗ ಚಿತ್ರದ ಶೂಟಿಂಗ್‌ಗಲ್ಲಿ ಭಾಗಿಯಾಗಿದ್ದಾರೆ.

'ಜವಾನ್' ನಟಿ ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಪ್ಪು ಉಡುಪಿನಲ್ಲಿ ಕಾಣಿಸಿಕೊಂಡರು, ಅವರ ಅವಳಿ  ಮಕ್ಕಳಾದ'ಉಯಿರ್' ಮತ್ತು 'ಉಲಾಗ್' ಜತೆಗೆ ಮುಂಬೈಗೆ ಆಗಮಿಸಿದರು.

 ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ಅಕ್ಷಯ್ ಒಬೆರಾಯ್ ಅವರಂತಹ ಹಲವಾರು ಪ್ರಮುಖ ನಟರು ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ.

'ಟಾಕ್ಸಿಕ್' ಚಿತ್ರವು ಪಿರಿಯಡ್ ಡ್ರಾಮಾ ಮತ್ತು ಆಕ್ಷನ್ ಥ್ರಿಲ್ಲರ್ ಆಗಿದ್ದು, ಈ ಚಿತ್ರವು ಗೋವಾದಲ್ಲಿ ಡ್ರಗ್ ಕಾರ್ಟೆಲ್ ಸುತ್ತ ಸುತ್ತುತ್ತದೆ. ಯಶ್ ಒಬ್ಬ ಒರಟಾದ ಮತ್ತು ತೀವ್ರವಾದ ಪಾತ್ರವನ್ನು ನಿರ್ವಹಿಸುತ್ತಾರೆ, ಇದು 'ಕೆಜಿಎಫ್' ಸರಣಿಯ ಯಶಸ್ಸಿನ ನಂತರ ಮತ್ತೊಂದು ಪವರ್‌ಹೌಸ್ ಪ್ರದರ್ಶನದಂತೆ ಕಾಣುತ್ತದೆ. ಚಿತ್ರದ ಕಥೆ ಮುಂಬೈ, ಗೋವಾ ಮತ್ತು ಬೆಂಗಳೂರು ಸೇರಿದಂತೆ ಹಲವು ಸ್ಥಳಗಳನ್ನು ವ್ಯಾಪಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ