ಬರ್ತಡೇ ಪಾರ್ಟಿಯಲ್ಲಿ ಪತ್ನಿಗಾಗಿ ವಿಶೇಷ ಹಾಡು ಹಾಡಿದ ರಾಕಿಬಾಯ್ (Video)

Sampriya

ಭಾನುವಾರ, 9 ಮಾರ್ಚ್ 2025 (16:51 IST)
Photo Courtesy X
ಬೆಂಗಳೂರು: ಸಿನಿಮಾ ಶೂಟಿಂಗ್ ಮಧ್ಯೆಯೂ ಪತ್ನಿ ರಾಧಿಕಾ ಪಂಡಿತ್ ಅವರ 41ನೇ ವರ್ಷದ ಹುಟ್ಟುಹಬ್ಬವನ್ನು ರಾಕಿಬಾಯ್ ಅದ್ಧೂರಿಯಾಗಿ ಆಚರಿಸಿದ್ದಾರೆ.

ಹತ್ತಿರದ ಫ್ರೆಂಡ್ಸ್‌ ಹಾಗೂ ಫ್ಯಾಮಿಲಿ ಸರ್ಕಲ್‌ನವರು ರಾಧಿಕಾ ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಇನ್ನೂ  ಪಾರ್ಟಿಯಲ್ಲಿ ಪತ್ನಿಗಾಗಿ ಯಶ್‌ ವಿಶೇಷ ಹಾಡೊಂದನ್ನು ಹಾಡಿದರು.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

ದಿವಂಗತ್ ನಟ ಶಂಕರ್‌ನಾಗ್ ಅವರ ‘ಗೀತಾ’ ಚಿತ್ರದ ಜನಪ್ರಿಯ ಹಾಡು ‘ಜೊತೆ ಜೊತೆಯಲಿ’ ಹಾಡನ್ನು
ಹಾಡುವ ಮೂಲಕ ರಾಧಿಕಾ ಅವರಿಗೆ ಸರ್ಪ್ರೈಸ್ ನೀಡಿದ್ದಾರೆ. ಈ ವಿಡಿಯೋವನ್ನು ರಾಧಿಕಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯಶ್‌- ರಾಧಿಕಾ ದಂಪತಿಗೆ  ಐರಾ ಮತ್ತು ಯಥರ್ವ ಎಂಬ ಇಬ್ಬರು ಮಕ್ಕಳಿದ್ದಾರೆ.



For some reason, closely looking at his "body language" while singing remembered me on our APPU ????❤️
(observe Appu's body language while singing on stages & see this again)#YashBoss #ToxicTheMovie #PuneethRajkumar #Yash pic.twitter.com/QeAvTxrTIe

— nUtHaN (@nuthannnnnn) March 9, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ