ನವಾಜುದ್ದೀನ್ ಸಿದ್ದಿಕಿ ಸಹೋದರನ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ ಸೊಸೆ
ಚಿಕ್ಕ ವಯಸ್ಸಿನಿಂದಲೂ ನಾನು ನವಾಜುದ್ದೀನ್ ಸಹೋದರನಿಂದ ಲೈಂಗಿಕ ಶೋಷಣೆಗೊಳಗಾಗಿದ್ದೆ. ಈಗ ಮದುವೆಯಾದ ಮೇಲೂ ನನ್ನ ಗಂಡನ ಮನೆಯವರಿಗೂ ಕಿರುಕುಳ ನೀಡುತ್ತಿದ್ದಾರೆ. ನಾನು ಈ ಬಗ್ಗೆ ನವಾಜುದ್ದೀನ್ ರಲ್ಲಿ ಹೇಳಿದಾಗ ‘ಹಾಗೆಲ್ಲಾ ಏನೂ ಮಾಡಲ್ಲ. ಎಷ್ಟೇ ಆದರೂ ಅವನು ನಿನ್ನ ಮಾವನಲ್ಲವೇ’ ಎಂದು ನನ್ನ ಮಾತನ್ನು ತಳ್ಳಿ ಹಾಕಿದರು. ಆದರೆ ನವಾಜುದ್ದೀನ್ ಸಹೋದರನ ವರ್ತನೆ, ಆತ ನನ್ನನ್ನು ಸ್ಪರ್ಶಿಸುತ್ತಿದ್ದ ರೀತಿ ನನಗೆ ಹಿಂಸೆಯಾಗುತ್ತಿತ್ತು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.