ಕಾರ್ಮಿಕರಿಗಾಗಿ 10 ಬಸ್ ಸ್ಪಾನ್ಸರ್ ಮಾಡಿದ ಬಿಗ್ ಬಿ ಅಮಿತಾಭ್ ಬಚ್ಚನ್

ಶನಿವಾರ, 30 ಮೇ 2020 (10:00 IST)
ಮುಂಬೈ: ತಮ್ಮ ತವರಿಗೆ ತೆರಳಲು ಹೆಣಗಾಡುತ್ತಿರುವ ವಲಸೆ ಕಾರ್ಮಿಕರಿಗೆ ನಟ ಸೋನು ಸೂದ್ ಬಸ್ ವ್ಯವಸ್ಥೆ ಮಾಡಿ ಸುದ್ದಿಯಾಗಿದ್ದರು. ಇದೀಗ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡಾ ಬಸ್ ವ್ಯವಸ್ಥೆ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಮುಂಬೈನಿಂದ ಉತ್ತರ ಪ್ರದೇಶಕ್ಕೆ ತೆರಳಬೇಕಿರುವ ಕಾರ್ಮಿಕರಿಗೆ 10 ಬಸ್ ವ್ಯವಸ್ಥೆ ಮಾಡಿದ್ದಾರೆ ಅಮಿತಾಭ್. ಈ ಬಸ್ ಗಳಲ್ಲಿ 225 ವಲಸೆ ಕಾರ್ಮಿಕರು ತವರಿಗೆ ತೆರಳಲಿದ್ದಾರೆ.

ಈಗಾಗಲೇ ಕೊರೋನಾದಿಂದಾಗಿ ಸಂಕಷ್ಟಕ್ಕೀಡಾದವರಿಗೆ ಊಟದ ವ್ಯವಸ್ಥೆ ಮಾಡಿದ್ದ ಅಮಿತಾಭ‍್ ಈಗ ಕಾರ್ಮಿಕರಿಗೂ ನೆರವಾಗಿ ವಿಶಾಲ ಹೃದಯ ಮೆರೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ