26 ವರ್ಷಗಳ ಬಳಿಕ ಮನೆಗೆ ಮಗ ಬಂದ: ಮಗನ ಆಗಮಕ್ಕೆ ಖುಷಿಯಾದ ನಟಿ ನವ್ಯಾ ನಾರಾಯಣ್‌

Sampriya

ಶುಕ್ರವಾರ, 29 ಆಗಸ್ಟ್ 2025 (11:05 IST)
Photo Credit X
ಬೆಂಗಳೂರು: ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ, ಗೌರಿಪುರದ ಗಯ್ಯಾಳಿಗಳು ಸೇರಿದಂತೆ ಅನೇಕ ಸಿರಿಯಲ್‌ನಲ್ಲಿ ನಟಿಸಿದ ನವ್ಯಾ ನಾರಾಯಣ್ ಅವರು ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 

ಈಚೆಗಷ್ಟೇ ತಮ್ಮ ಊರಿನಲ್ಲಿ ಅದ್ಧೂರಿ ಸೀಮಂತ ಮಾಡಿಕೊಂಡಿದ್ದ ನವ್ಯಾ ಅವರು ಇಂದು ಗಂಡು ಮಗುವನ್ನು ಸ್ವಾಗತಿಸಿರುವುದಾಗಿ ಹೇಳಿಕೊಂಡಿದ್ದಾರೆ. 

ಮನೆಗೆ 28ವರ್ಷದ ನಂತರ ಮಗ ಬಂದ. ಎಲ್ರಿಗೂ ಥ್ಯಾಂಕ್ಯೂ ಎಂದು ನಟಿ ಬೇಬಿ ಬಂಪ್‌ ಫೋಟೋ ಹಂಚಿ ಬರೆದುಕೊಂಡಿದ್ದಾರೆ. 

2023ರ ನವೆಂಬರ್ 30 ರಂದು ಯೂಟ್ಯೂಬರ್‌ ಚಂದನ್ ಗೌಡ ಅವರನ್ನ ನವ್ಯಾ ನಾರಾಯಣ್ ಗೌಡ ವಿವಾಹವಾದರು. ಮದುವೆ ಬಳಿಕ ಕಿರುತೆರೆಯಿಂದ ದೂರಾ ಉಳಿದಿರುವ ನವ್ಯಾ ಅವರು ಯೂಟ್ಯೂಬ್ ಮೂಲಕ ತನ್ನ ಜೀವನದ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. 

ಪತ್ನಿಗೆ ನವ್ಯಾಗೆ ಚಂದನ್‌ ಅವರು ಅದ್ಧೂರಿಯಾಗಿ ಸೀಮಂತ ಮಾಡಿದ್ದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ