Pavitra Gowda: ಶಕ್ತಿ ದೇವತೆ ಮೊರೆ ಹೋದ ಪವಿತ್ರಾ ಗೌಡ

Sampriya

ಮಂಗಳವಾರ, 15 ಏಪ್ರಿಲ್ 2025 (19:39 IST)
ಬೆಂಗಳೂರು: ಈಚೆಗೆ ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋವನ್ನು ರಿಲಾಂಚ್ ಮಾಡಿದ್ದ ಬೆನ್ನಲ್ಲೇ ಮಾಡೆಲ್‌, ನಟಿ ಪವಿತ್ರಾ ಗೌಡ ಅವರು ಶಕ್ತಿ ದೇವತೆ ಬನಶಂಕರಿ ಮೊರೆ ಹೋಗಿದ್ದಾರೆ. ಬೆಂಗಳೂರಿನ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಸಂಕಷ್ಟಗಳನ್ನು ದೂರ ಮಾಡುವಂತೆ ಪವಿತ್ರಾ ಬನಶಂಕರಿ ದೇವಿಯನ್ನು ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ನಿಮಿಷಾಂಬಾ ದೇವಸ್ಥಾನಕ್ಕೂ ಅವರು ತೆರಳಿದ್ದಾರೆ. ದೇವಿಗೆ ಮಡಿಲಕ್ಕಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ.  

ಪವಿತ್ರಾ ಸದ್ಯ ರೆಡ್ ಕಾರ್ಪೆಟ್ ಸ್ಟುಡಿಯೋ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಇದನ್ನು ಮತ್ತೆ ರೀ ಲಾಂಚ್‌ ಮಾಡಿದ್ದರು.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಿಂದ ಜಾಮೀನು ಮೂಲಕ ಹೊರಬಂದಿರುವ ಪವಿತ್ರಾ ಗೌಡ ಅವರು ಸದ್ಯ ತಮ್ಮ ಉದ್ಯಮದ ಕಡೆ ಗಮನ ವಹಿಸಿದ್ದಾರೆ. ರೆಡ್‌ ಕಾರ್ಪೆಟ್ ಸ್ಟುಡಿಯೋ ಅನ್ನು ರೀಲಾಂಚ್ ಮಾಡಿದ ಪವಿತ್ರಾ ಗೌಡ ಅವರು ಇದೀಗ ದೇವರ ಮೊರೆ ಹೋಗಿದ್ದಾರೆ.







ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ