ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಎ1 ಆರೋಪಿ ಪವಿತ್ರಾ ಗೌಡ ಹಾಗೂ ನಟ ದರ್ಶನ್ ಸೇರಿದಂತೆ ಪ್ರಕರಣದ ಎಲ್ಲ ಆರೋಪಿಗಳು ಇಂದು ಕೋರ್ಟ್ ಮುಂದೆ ಹಾಜರಾದರು. ಮುಂದಿನ ವಿಚಾರಣೆಯನ್ನು ಏ.8ಕ್ಕೆ ಕೋರ್ಟ್ ಮುಂದೂಡಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಎಲ್ಲ ಆರೋಪಿಗಳಿಗೆ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಇನ್ನೂ ಷರತ್ತಿನಲ್ಲಿ ಮುಖ್ಯವಾಗಿ ಕೋರ್ಟ್ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿತ್ತು. ಅದರಂತೆ ಇಂದು ಪ್ರರಕಣದ ಎಲ್ಲ ಆರೋಪಿಗಳು ಕೋರ್ಟ್ ಮುಂದೆ ಹಾಜರಾದರು.
ಎಲ್ಲರ ಹಾಜರಾತಿಯನ್ನು ಕೋರ್ಟ್ ಸಿಬ್ಬಂದಿ ದಾಖಲಿಸಿಕೊಂಡರು. ಇನ್ನೂ ಈ ಪ್ರಕರಣದ ಬಳಿಕ ದರ್ಶನ್ ಹಾಗೂ ಪವಿತ್ರಾ ಗೌಡ ಅವರು ಎರಡು ಬಾರಿ ಮುಖಾಮುಖಿಯಾಗಿದ್ದಾರೆ. ಈ ಹಿಂದೆ ಕೋರ್ಟ್‌ನಲ್ಲಿ ಪವಿತ್ರಾ ಬಳಿ ದರ್ಶನ್ ಅವರು ಮಾತನಾಡಿದ್ದರು. ಆದರೆ ಈ ಬಾರಿ ದರ್ಶನ್ ಅವರು ಪವಿತ್ರಾ ಗೌಡರಿಂದ ದೂರವೇ ನಿಂತಿದ್ದರು ಎಂದು ತಿಳಿದುಬಂದಿದೆ.
ಇನ್ನೂ ದರ್ಶನ್ ಅವರು ಈ ಪ್ರಕರಣದ ಬಳಿಕ ಬೆನ್ನು ನೋವಿನಿಂದ ಬಳಲುತ್ತಿದ್ದು, ಸದ್ಯ ಪ್ಯಾಮಿಲಿ ಜತೆ ಟೈಮ್ ಕಳೆಯುತ್ತಿದ್ದಾರೆ. ಕೋರ್ಟ್ ವಿಚಾರಣೆ ಬಳಿಕ ದರ್ಶನ್ ಅವರು ತಮ್ಮ ಆರ್ ಆರ್ ನಗರದ ಮನೆಗೆ ವಾಪಾಸ್ಸಾಗಿದ್ದು, ಈ ವೇಳೆ ಅವರನ್ನು ಭೇಟಿಯಾಗಲು ಅಭಿಮಾನಿಗಳು ಕಾದು ಕುಳಿತಿದ್ದರು.