ಫಸ್ಟ್‌ ಲೈಕ್ ಕೊಟ್ಟೆ, ಶೆಡ್‌ನ ನೆನ್ಪ ಆಯ್ತು ಅನ್‌ಲೈಕ್ ಮಾಡ್ದೆ, ಪವಿತ್ರಾ ಗೌಡ ರೀಲ್ಸ್‌ಗೆ ಬಗೆ ಬಗೆ ಕಮೆಂಟ್‌

Sampriya

ಶನಿವಾರ, 15 ಫೆಬ್ರವರಿ 2025 (20:23 IST)
Photo Courtesy X
ಬೆಂಗಳೂರು: ರೆಡ್ ಕಾರ್ಪೆಟ್‌ ಸ್ಟುಡಿಯೋಸ್‌ ಅನ್ನು ರೀಲಾಂಚ್ ಮಾಡಿರುವ ಖುಷಿಯಲ್ಲಿರುವ ಪವಿತ್ರಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸೀರೆಯುಟ್ಟು ಮಗಳೊಂದಿಗೆ ರೀಲ್ಸ್‌ವೊಂದನ್ನು ಶೇರ್ ಮಾಡಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಮೂಲಕ ಹೊರಬಂದಿರುವ ಪವಿತ್ರಾ ಗೌಡ ಅವರು ಒಂದು ತಿಂಗಳ ಬ್ರೇಕ್ ಬಳಿಕ ತಮ್ಮ ರೆಡ್‌ ಕಾರ್ಪೆಟ್ ಸ್ಟುಡಿಯೋಸ್‌ ಅನ್ನು ಪ್ರೇಮಿಗಳ ದಿನದಂದು ರೀಲಾಂಚ್ ಮಾಡಿದ್ದರು.

ದುಬಾರಿ ಕಾರಿನಲ್ಲಿ ಸನ್ ಗ್ಲಾಸ್ ಹಾಕಿಕೊಂಡು, ಸೀರೆಯುಟ್ಟು ಸಖತ್ ರೆಡಿಯಾಗಿ ಬಂದಿದ್ದರು. ಇವರ ಮಗಳು ಖುಷಿ ಕೂಡಾ ಅಮ್ಮನ ಸ್ಟುಡಿಯೋ ಲಾಮಚ್‌ಗೆ ಸಾರಿಯುಟ್ಟು ಬಂದಿದ್ದಳು. ಮಗಳೊಂದಿಗಿನ ವಿಡಿಯೋವನ್ನು ಪವಿತ್ರಾ ಗೌಡ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.  

ಈ ವಿಡಿಯೋಗೆ ಹಲವು ಶುಭಕೋರಿ ವಿಶ್ ಮಾಡಿದ್ರೆ, ಕೆಲವರು ಕಾಮೆಂಟ್‌ ಮಾಡಕ್ಕೆ ಭಯ ಎಂದಿದ್ದಾರೆ. ಒಬ್ಬರು ಫಸ್ಟ್‌ ಲೈಕ್ ಕೊಟ್ಟೆ, ಶೆಡ್‌ನ ನೆನ್ಪ ಆಯ್ತು ಅನ್‌ಲೈಕ್ ಮಾಡ್ದೆ ಎಂದು ಕಮೆಂಟ್ ಮಾಡಿದ್ದಾರೆ.

ಕಾಮೆಂಟ್‌ ನೋಡೋಕೆ ಬಂದೆ ಮತ್ತೆ ಯಾರಾದ್ರೂ ಶೆಡ್ಡಿಗೆ ಬರ್ಲಿಕ್ಕೆ  ರೆಡಿ ಇದ್ದಾರಾ ಹೇಗೆ ಅಂತ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ