ಪವನ್ ಕಲ್ಯಾಣ್ ಅಭಿಮಾನಿಗಳು ಪವನ್ ಮಾಜಿ ಪತ್ನಿ ರೇಣು ದೇಸಾಯಿಗೆ ಕೊಲೆ ಬೆದರಿಕೆ ಹಾಕಿದ್ಯಾಕೆ?

ಬುಧವಾರ, 27 ಜೂನ್ 2018 (15:35 IST)
ಹೈದರಾಬಾದ್ : ಮತ್ತೊಂದು ಮದುವೆಯಾಗಲು ಹೊರಟ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಅವರಿಗೆ ಪವನ್ ಕಲ್ಯಾಣ್ ಅವರ ಅಭಿಮಾನಿಗಳು ಕೊಲೆ ಬೆದರಿಕೆ ಒಡುತ್ತಿದ್ದಾರಂತೆ.


ಇತ್ತೀಚೆಗೆ ರೇಣು ದೇಸಾಯಿ ಅವರು ತಾವು ಪ್ರೀತಿಸುತ್ತಿದ್ದ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಆ ಫೊಟೋವನ್ನು ಸೋಮವಾರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಇದಕ್ಕೆ ಪವನ್ ಕಲ್ಯಾಣ್ ಸಹ  ತಮ್ಮ ಮಾಜಿ ರೇಣು ದೇಸಾಯಿ ಅವರಿಗೆ ವಿಶ್ ಮಾಡಿ ಜೀವನ ಸುಖಮಯವಾಗಿರಲೆಂದು ತಮ್ಮ ಟ್ವಿಟರ್ನಲ್ಲಿ ಹಾರೈಸಿದ್ದಾರೆ ಎನ್ನಲಾಗಿದೆ. ಆದರೆ ರೇಣುಗೆ ಪವನ್ ಅಭಿಮಾನಿಗಳು ಮಾತ್ರ ಎರಡನೇ ಮದುವೆ ಮಾಡಿಕೊಳ್ಳದಂತೆ ಕೊಲೆ ಬೆದರಿಕೆ ಒಡುತ್ತಿದ್ದಾರಂತೆ. ಈ ವಿಷಯವನ್ನು ಸ್ವತಃ ರೇಣು ಅವರೇ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ