ಬೆಂಗಳೂರು: ದಿವಂಗತ ಡಾ.ವಿಷ್ಣವರ್ಧನ್ ಹಾಗೂ ಬಿ. ಸರೋಜಾ ದೇವಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿರುವುದು ತುಂಬಾನೇ ಖುಷಿ ಇದೆ. ಅದರ ಜತೆಗೆ ಅಂಬರೀಶ್ ಅವರಿಗೂ ನೀಡುತ್ತಿದ್ದರೆ ಅದರ ಸಂಭ್ರಮ ಇನ್ನಷ್ಟು ಹೆಚ್ಚಾಗ್ತಿತ್ತು ಎಂದು ನಟಿ ತಾರಾ ಅವರು ಹೇಳಿದ್ದಾರೆ.
ಕನ್ನಡ ಸಿನಿಮಾ ರಂಗದಲ್ಲಿ ನಟ ಅಪಾರ ಸಾಧನೆ ಮಾಡಿದ ನಟ ದಿವಂಗತ ಅಂಬರೀಶ್ ಅವರಿಗೂ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ನಟಿ ತಾರಾ ಅವರು ಡಿಸಿಎಂ ಡಿಕೆ ಶಿವಕುಮಾರ್ಗೆ ಮನವು ಮಾಡಿದ್ದಾರೆ.
ಸದಾಶಿವನಗರದ ಡಿಸಿಎಂ ಡಿಕೆಶಿ ನಿವಾಸಕ್ಕೆ ಆಗಮಿಸಿ ತಾರಾ ಅವರು, ಅಂಬರೀಶ್ ಅವರಿಗೂ ಪ್ರಶಸ್ತಿಯನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ತಾರಾ ಅವರು, ರಾಜ್ಯದಲ್ಲಿ ಆಳಿದ ಎಲ್ಲ ಸರ್ಖಾರಗಲು ಸಿನಿಮಾ ರಂಗದ ಮನವಿಗೆ ಉತ್ತಮವಾಗಿ ಸ್ಪಂದಿಸಿದೆ. ಆದರೆ ಎಲ್ಲವನ್ನೂ ಕೇಳಿ ಪಡೆದುಕೊಳ್ಳಬೇಕಾಗಿರುವುದು ಬೇಜಾರಿನ ವಿಚಾರ. ಕೇಳುವ ಮಟ್ಟಕ್ಕೆ ಸರ್ಕಾರ ನಡೆಸಿಕೊಳ್ಳಬಾರದು ಎಂದು ಹೇಳಿದರು.
ಇನ್ನೂ ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರು ಕುಚುಕು ಗೆಳೆಯರು. ಅವರಿಬ್ಬರಿಗೆ ಒಂದೇ ವೇದಿಕೆಯಲ್ಲೇ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಸಿಕ್ಕಿದ್ರೆ ಅದರ ಸಂಭ್ರಮ ಇನ್ನಷ್ಟು ಹೆಚ್ಚಾಗುತ್ತೆ ಎಂದರು.
ಡಾ.ರಾಜ್‌ಕುಮಾರ್ ಅವರ ನಿಧನದ ನಂತರ ಅಂಬರೀಶ್ ಅವರು ಕನ್ನಡ ಚಲನಚಿತ್ರ ಮಂಡಳಿಯ ಅಧ್ಯಕ್ಷರಾಗಿದ್ದರು. ಅದಲ್ಲದೆ ಕನ್ನಡ ಸಿನಿಮಾ ರಂಗದ ಎಲ್ಲ ಬೇಕು ಬೇಡಗಳಿಗೆ ಧ್ವನಿಯಾಗಿದ್ದರು. ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡಬೇಕೆಂಬುದು ನನ್ನ ಆಶಯ ಎಂದರು.