ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಜನಸೇನಾ ಪಕ್ಷದ ಸಂಸ್ಥಾಪಕ, ನಟ ಪವನ್ ಕಲ್ಯಾಣ್

ಶನಿವಾರ, 30 ಜೂನ್ 2018 (14:38 IST)
ವಿಶಾಖಪಟ್ಟಣ : ಸಂಯುಕ್ತ ಆಂಧ್ರ ಪ್ರದೇಶವು ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಎಂದು ವಿಭಜನೆಯಾದ ನಂತರ ಈಗ  ಜನಸೇನಾ ಪಕ್ಷದ ಸಂಸ್ಥಾಪಕ, ನಟ ಪವನ್ ಕಲ್ಯಾಣ್ ಅವರು ಉತ್ತರ ಆಂಧ್ರಕ್ಕೆ ವಿಶೇಷ ಗಮನ ನೀಡಿ ಇಲ್ಲವೆ ನಮ್ಮ ಆಡಳಿತವನ್ನ ನಮಗೇ ವಹಿಸಿ ಎಂದು ಒತ್ತಾಯ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಉತ್ತರಾಂಧ್ರ ಮಾಸ ಪತ್ರಿಕೆಯ ಹಳೆಯ ಮುಖಪುಟವೊಂದನ್ನು ಟ್ವೀಟ್ ಮಾಡಿರುವ ಪವನ್ ಕಲ್ಯಾಣ್ ಅವರು, 'ಉತ್ತರ ಆಂಧ್ರವನ್ನು ಸರ್ಕಾರವು ಹೀಗೆ ನಿರ್ಲಕ್ಷ್ಯ ಮಾಡಿದರೆ, ಉತ್ತರ ಆಂಧ್ರ ಪ್ರತ್ಯೇಕ ರಾಜ್ಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ' ಎಂದು ನಟ ಪವನ್ ಕಲ್ಯಾಣ್ ಅವರು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳು ಕೂಡ ಬೆಂಬಲವನ್ನನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ