ನಟನ ಮೇಲಿನ ಹುಚ್ಚು ಅಭಿಮಾನದಿಂದ ಪ್ರಾಣತೆತ್ತ ಅಭಿಮಾನಿಗಳು

ಶುಕ್ರವಾರ, 8 ಜೂನ್ 2018 (14:25 IST)
ಹೈದರಾಬಾದ್ : ಟಾಲಿವುಡ್ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ 'ಫ್ಲೆಕ್ಸ್' ಅನ್ನು ಅಳವಡಿಸುವಾಗ ವಿದ್ಯುತ್ ತಂತಿ ತಗುಲಿ ಅವರ ಇಬ್ಬರು ಅಭಿಮಾನಿಗಳು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ 90 ಕಿ.ಮೀ ದೂರದಲ್ಲಿರುವ ಪಯಕರಾಪೇಟಾ ಪಟ್ಟಣದಲ್ಲಿ ಮಂಗಳವಾರ ರಾತ್ರಿ ಪವನ್ ಕಲ್ಯಾಣ್ ಅವರ 30 ಅಡಿ ಎತ್ತರದ 'ಫ್ಲೆಕ್ಸ್' ಅನ್ನು ಸ್ಥಾಪಿಸುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ಟಿ. ನಾಗರಾಜು (28) ಮತ್ತು ಬಿ. ಶಿವ (31) ಮೃತಪಟ್ಟ ಪವನ್ ಅಭಿಮಾನಿಗಳು ಎಂದು ಗುರುತಿಸಲಾಗಿದೆ. ಈ ಹಿನ್ನಲೆಯಲ್ಲಿ ಗುರುವಾರ ಪಟ್ಟಣಕ್ಕೆ ಭೇಟಿ ನೀಡುವಂತೆ ಪವನ್ ಕಲ್ಯಾಣ್ ಅವರಿಗೆ ಪೊಲೀಸರು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ