ಬಾಹುಬಲಿ ರೆಕಾರ್ಡ್ ಬ್ರೇಕ್ ಮಾಡಲಿರುವ ಪ್ರಭಾಸ್

ಶನಿವಾರ, 24 ಆಗಸ್ಟ್ 2019 (09:19 IST)
ಹೈದರಾಬಾದ್: ಪ್ರಭಾಸ್ ಬಾಹುಬಲಿ ಸಿನಿಮಾ ಮೂಲಕ ಮಾಡಿದ ದಾಖಲೆ ಈಗಲೂ ಕೆಲವೊಂದು ಬ್ರೇಕ್ ಆಗಿಲ್ಲ. ಆದರೆ ಈಗ ಪ್ರಭಾಸ್ ಸ್ವತಃ ತಮ್ಮದೇ ಸಾಹೋ ಸಿನಿಮಾ ಮೂಲಕ ಬಾಹುಬಲಿ ದಾಖಲೆಯೊಂದನ್ನು ಮುರಿಯಲಿದ್ದಾರೆ.


ಸಾಹೋ ಕೂಡಾ ಬಾಹುಬಲಿಯಂತೇ ಬಹುಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಆ ಮೂಲಕ ಮತ್ತೆ ಬಾಹುಬಲಿಯಲ್ಲಿ ಮಾಡಿದ ಮೋಡಿ ಮಾಡಲು ರೆಡಿಯಾಗಿದೆ. ಆಗಸ್ಟ್ 30 ರಂದು ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.

ತಮಿಳುನಾಡಿನಲ್ಲಿ ಈ ಬಾರಿ ಸಾಹೋ 550 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ. ಬಾಹುಬಲಿ ಅಂದು 525 ಸ್ಕ್ರೀನ್ ಗಳಲ್ಲಿ ತೆರೆ ಕಂಡಿತ್ತು. ಆ ಮೂಲಕ ಬಾಹುಬಲಿ ದಾಖಲೆಯನ್ನೂ ಸಾಹೋ ಮುರಿಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ