ಸಿಗರೇಟು ಸೇದಿದ್ದಕ್ಕೆ ಟ್ರೋಲ್ ಆದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ

ಸೋಮವಾರ, 22 ಜುಲೈ 2019 (08:56 IST)
ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಬೀಚ್ ಬದಿಯಲ್ಲಿ ಸಿಗರೇಟು ಸೇದುತ್ತಿರುವ ಫೋಟೋವೊಂದು ವೈರಲ್ ಆಗಿದ್ದು, ಟ್ರೋಲ್ ಆಗಿದ್ದಾರೆ.


ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯವಾಗುತ್ತದೆ. ಉಸಿರಾಟದ ತೊಂದರೆಯಾಗುತ್ತದೆ. ಹಾಗಾಗಿ ಪಟಾಕಿ ಸಿಡಿಸಬೇಡಿ ಎಂದು ಭಾಷಣ ಬಿಗಿಯುವ ಪ್ರಿಯಾಂಕಾ ಚೋಪ್ರಾ ಈಗ ಸಾರ್ವಜನಿಕವಾಗಿ ಧೂಮಪಾನ ಮಾಡಿದರೆ ಅಸ್ತಮಾ ಬರೋದಿಲ್ವೇ ಎಂದು ಪ್ರಿಯಾಂಕಾರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ತಮ್ಮ ಬರ್ತ್ ಡೇ ಪ್ರಯುಕ್ತ ಮಿಯಾಮಿ ಬೀಚ್ ನಲ್ಲಿ ರಿಲ್ಯಾಕ್ಸ್ ಮೂಡ್ ನಲ್ಲಿರುವ ಪ್ರಿಯಾಂಕಾ ಸಿಗರೇಟ್ ಸೇದುತ್ತಿದ್ದರೆ, ಅವರ ತಾಯಿ ಮಧು ಚೋಪ್ರಾ ಹಾಗೂ ಪತಿ ನಿಕ್ ಜೊನಾಸ್ ಸಿಗಾರ್ ಸೇದುತ್ತಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪ್ರಿಯಾಂಕಾ ಟ್ರೋಲ್ ಆಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ