ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಅಮೆರಿಕದ ಖ್ಯಾತ ಗಾಯಕ ನಿಕ್ ಜೋನ್ಸ್ ಮದುವೆ ಇದೇ ವರ್ಷ ಸೆಪ್ಟೆಂಬರ್ 16ರಂದು ನಿಗದಿಯಾಗಿದ್ದು, ಈ ಡೇಟ್ಸ್ ಬಹುತೇಕ ಖಚಿತವಾಗಿದೆ ಎಂಬುದಾಗಿ ತಿಳಿದುಬಂದಿದೆ.
ಪ್ರಿಯಾಂಕ ಅವರ 36ನೇ ಜನ್ಮದಿನವಾದ ಜುಲೈ 18ರಂದು ಪ್ರಿಯಾಂಕ- ನಿಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂಬ ಸುದ್ದಿ ಕೇಳಿಬಂದಿತ್ತು. ಇದೀಗ ಈ ಸುದ್ದಿಯ ಬೆನ್ನಲ್ಲೇ ಪ್ರಿಯಾಂಕ ಅವರ ಪ್ರಿಯಕರ ನಿಕ್ ಜನ್ಮದಿನವಾದ ಸೆಪ್ಟೆಂಬರ್ 16ರಂದು ಇವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಎಲ್ಲಾಕಡೆ ಹರಿದಾಡುತ್ತಿದೆ.
ಆದ ಕಾರಣ ಪ್ರಿಯಾಂಕ ಸಲ್ಮಾನ್ ಖಾನ್ ಅಭಿನಯದ ಭರತ್ ಸಿನಿಮಾದಿಂದ ಹೊರಬಂದಿದ್ದಾರೆ. ಹಾಗೇ ನಿಕ್ ಕೂಡ ಯಾವುದೇ ಸಂಗೀತ ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳುತ್ತಿಲ್ಲವಂತೆ. ನ್ಯಾಯಾರ್ಕ್‍ನ ತನ್ನ ಕಚೇರಿಯನ್ನು ಬಂದ್ ಮಾಡಿರುವ ನಿಕ್ ಮದುವೆಗೆ ಬೇಕಾದ ದುಬಾರಿ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ